ನವದೆಹಲಿ, ಏ.8-ಎಂಜಿನ್ ದೋಷದಿಂದಾಗಿ ಅಂತಾರಾಷ್ಟ್ರೀಯ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದ ಘಟನೆ ನಿನ್ನೆ ಸಂಜೆ ದೆಹಲಿ ಏರ್‍ಪೆÇೀರ್ಟ್‍ನಲ್ಲಿ ನಡೆದಿದ್ದು, ಅದರಲ್ಲಿದ್ದ 345 ಪ್ರಯಾಣಿಕರು ಸುರಕ್ಷಿತವಾಗಿ ಅಪಾಯದಿಂದ ಪಾರಾದರು.
ವಿಯೆಟ್ನಾಂನಿಂದ ರಷ್ಯಾಗೆ ತೆರಳುತ್ತಿದ್ದ ಎಬಿಜಿ-8772 ವಿಮಾನದ ಎಂಜಿನ್‍ನಲ್ಲಿ ತಾಂತ್ರಿಕ ದೋಷ ಕಂಡು ಬಂದಿತು. ತಕ್ಷಣ ಕಾರ್ಯಪ್ರವೃತ್ತವಾದ ಪೈಲೆಟ್‍ಗಳು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ತುರ್ತು ಭೂಸ್ಪರ್ಶಕ್ಕೆ ಅನುಮತಿ ಕೋರಿದರು. ಸಮ್ಮತಿ ದೊರೆತ ನಂತರ ಟ-3 ಟರ್ಮಿನಲ್‍ನಲ್ಲಿ ವಿಮಾನ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತು.
ವಿಮಾನ ಭೂಸ್ಪರ್ಶದ ವೇಳೆ ಮುಂಜಾಗ್ರತಾ ಕ್ರಮವಾಗಿ 8 ಅಗ್ನಿಶಾಮಕ ವಾಹನಗಳು ಹಾಗೂ ವೈದ್ಯರ ತಂಡವಿದ್ದ ಆಂಬ್ಯುಲೆನ್ಸ್‍ಗಳು ರನ್‍ವೇನಲ್ಲಿ ಯಾವುದೇ ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿದ್ದವು. ಅದರಲ್ಲಿದ್ದ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ತುರ್ತಾಗಿ ವಿಮಾನದಿಂದ ತೆರವುಗೊಳಿಸಲಾಯಿತು ಎಂದು ದೆಹಲಿ ಇಂಟರ್‍ನ್ಯಾಷನಲ್ ಏರ್‍ಪೆÇೀರ್ಟ್ ಲಿಮಿಟೆಡ್ (ಡಿಎಐಎಲ್) ಅಧಿಕಾರಿಗಳು ತಿಳಿಸಿದ್ದಾರೆ.