ರಾಷ್ಟ್ರೀಯ ಶಿಕ್ಷಣ ನೀತಿ- ಎನ್ಇಪಿ 2020 ಪೂರ್ವ-ಪ್ರಾಥಮಿಕದಿಂದ ಹಿರಿಯ ಮಾಧ್ಯಮಿಕವರೆಗೆ ಶಾಲಾ ಶಿಕ್ಷಣದ ವಿಸ್ತಾರವನ್ನು ಒಳಗೊಂಡಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಹೇಳಿದೆ. ಮುಂದಿನ 20 ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನೀತಿಯನ್ನು ರೂಪಿಸಿರುವ ನೀಡಿರುವ ಶಿಫಾರಸುಗಳು ವೈವಿಧ್ಯಮಯ ಕಾಲಮಿತಿಗಳನ್ನು ಹೊಂದಿವೆ ಆದ್ದರಿಂದ ಎನ್ಇಪಿ ಅನುಷ್ಠಾನವನ್ನು ಹಂತ ಹಂತವಾಗಿ ನಡೆಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ. ಕಳೆದ ವರ್ಷ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಎನ್ಇಪಿ -2020 ಅನುಷ್ಠಾನ ಮತ್ತು ಸಮಗ್ರ ಪರಿಷ್ಕರಣೆ ಕುರಿತ ರಾಷ್ಟ್ರೀಯ ಕಾರ್ಯಾಗಾರಗಳ ಸರಣಿಯನ್ನು ನಡೆಸಲಾಗಿದೆ. ದಾಖಲಾತಿಗಳನ್ನು ಅಂತಿಮಗೊಳಿಸಲಾಗುತ್ತಿದ್ದು, ಅದನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಎನ್ಇಪಿಯ ಪ್ರಮುಖ ಭಾಗಗಳನ್ನು ಹೊಸ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು (ಎನ್ಸಿಎಫ್) ಮತ್ತು ಕೇಂದ್ರೀಯ ಪ್ರಾಯೋಜಿತ ಯೋಜನೆಗಳ ವ್ಯಾಪ್ತಿಗೆ ತರಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಎನ್ಸಿಎಫ್ಗೆ ಅಡಿಪಾಯವನ್ನು ಪ್ರಾರಂಭಿಸಲಾಗಿದ್ದು, ಬರುವ ಶೈಕ್ಷಣಿಕ ವರ್ಷದಲ್ಲಿ ಅದನ್ನು ಅಭಿವೃದ್ಧಿಪಡಿಸಲಾಗುತ್ತದೆ. ನೀತಿಯ ಶಿಫಾರಸುಗಳಿಗೆ ಅನುಗುಣವಾಗಿ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಇಲಾಖೆ ಎನ್ಇಪಿ ಅನುಷ್ಠಾನಕ್ಕೆ ಚಾಲನೆ ನೀಡಿದೆ. ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಮಿಷನ್ ಕುರಿತ ರಾಷ್ಟ್ರೀಯ ಮಿಷನ್ ಸ್ಥಾಪಿಸಲು ತಾತ್ವಿಕ ಅನುಮೋದನೆ ನೀಡಲಾಗಿದೆ ಮತ್ತು ಸಮಿತಿಯನ್ನು ರಚಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಶಾಲಾ ಶಿಕ್ಷಣಕ್ಕಾಗಿ ಭಾರತೀಯ ಸಂಕೇತ ಭಾಷಾ ನಿಘಂಟನ್ನು ಅಭಿವೃದ್ಧಿಪಡಿಸಲು ಭಾರತೀಯ ಸಂಕೇತ ಭಾಷಾ ಸಂಶೋಧನೆ ಹಾಗೂ ತರಬೇತಿ ಕೇಂದ್ರ ಮತ್ತು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ, ಎನ್ಸಿಇಆರ್ಟಿ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷೆಯ ಸುಧಾರಣೆಗಳನ್ನು ಪ್ರಾರಂಭಿಸಲಾಗಿದೆ. 2021-22ರ ಶೈಕ್ಷಣಿಕ ವರ್ಷದಿಂದ ಇಂಗ್ಲಿಷ್ ಮತ್ತು ಸಂಸ್ಕೃತವನ್ನು 2 ಹಂತಗಳಲ್ಲಿ ಪರಿಚಯಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
Related Articles
ಶಾಲೆ ಆರಂಭ : ಸರ್ಕಾರಕ್ಕಿಂದು ವರದಿ ಸಲ್ಲಿಕೆ
November 7, 2020
Varta Mitra News - SP
ಬೆಂಗಳೂರು, ರಾಜ್ಯ
Comments Off on ಶಾಲೆ ಆರಂಭ : ಸರ್ಕಾರಕ್ಕಿಂದು ವರದಿ ಸಲ್ಲಿಕೆ
Seen By: 61 ಬೆಂಗಳೂರು: ರಾಜ್ಯದಲ್ಲಿ ಶಾಲಾ ಪುನಾರಂಭ ಕುರಿತು ಶಿಕ್ಷಣ ಇಲಾಖೆ ಅಕಾರಿಗಳು ಮೂರನೇ ದಿನವಾದ ಶುಕ್ರವಾರವೂ ಸಭೆ ಸಭೆ ನಡೆಸಿದ್ದು ಪೊಷಕರಿಂದ ಹಾಗೂ ಖಾಸಗಿ [more]
ಸದ್ಯ ಶಾಲೆ ತೆರೆಯಲ್ಲ; ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ಸಿಎಂ ಬಿಎಸ್ ಯಡಿಯೂರಪ್ಪ
October 9, 2020
Varta Mitra News - SP
ಬೆಂಗಳೂರು, ರಾಷ್ಟ್ರೀಯ, ಸಿಎಂ ಹೆಚ್ಡಿಕೆ
Comments Off on ಸದ್ಯ ಶಾಲೆ ತೆರೆಯಲ್ಲ; ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ಸಿಎಂ ಬಿಎಸ್ ಯಡಿಯೂರಪ್ಪ
Seen By: 52 ಬೆಂಗಳೂರು: ಶಾಲೆಗಳನ್ನು ಪುನರ್ ಆರಂಭ ಮಾಡುವ ಕುರಿತು ಯಾವುದೇ ನಿರ್ಧಾರ ಮಾಡಿಲ್ಲ. ಪರಿಸ್ಥಿತಿ ನೋಡಿಕೊಂಡು ಈ ಬಗ್ಗೆ ತೀರ್ಮಾನ ಮಾಡಬೇಕು. ಶಾಲೆ ತೆರೆಯಲು ಪೋಷಕರ [more]
Seen By: 41 ರಾಜ್ಯದಲ್ಲಿ ಶಾಲಾ ತರಗತಿಗಳನ್ನು ಆರಂಭಿಸುವ ಕುರಿತು ನಾಳೆ ಶಾಲೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ವಿಡಿಯೋ ಕಾನ್ಫರೆನ್ಸ್ ಆಯೋಜಿಸಲಾಗಿದೆ. ಪ್ರತಿ ತಾಲೂಕಿನಿಂದ [more]