ಇಂದಿನಿಂದ ಉಮೇವಾರಿಕೆ ಸಲ್ಲಿಕೆ ಶುರು

ಬೆಂಗಳೂರು: ಚಳಿಗಾಲದ ಅವೇಶನಕ್ಕೆ ಕ್ಷಣಗಣನೆ ಆರಂಭವಾಗುತ್ತಿರುವ ಬೆನ್ನಲ್ಲೇ ಗ್ರಾಮ ಪಂಚಾಯತಿ ಚುನಾವಣೆಯ ತಯಾರಿಯೂ ಜೋರಾಗಿದ್ದು, ಡಿ.7 ರ ಸೋಮವಾರದಿಂದಲೇ ಮೊದಲ ಹಂತದ ಚುನಾವಣೆಗೆ ನಾಮಪತ್ರ ಪ್ರಕ್ರಿಯೆ ಶುರುವಾಗಲಿದೆ.
ಗ್ರಾಮ ಪಂಚಾಯತಿ ಚುನಾವಣೆಯು ಪಕ್ಷಗಳ ಚಿಹ್ನೆ ಆಧಾರದಲ್ಲಿ ನಡೆಯದಿದ್ದರೂ ಈಗಾಗಲೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ರಾಜಕೀಯ ಪಕ್ಷಗಳು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದು, ಪ್ರಜಾಪ್ರಭುತ್ವದ ತಳಹದಿಯಾಗಿರುವ ಪಂಚಾಯತಿ ಮಟ್ಟದಲ್ಲೂ ಅಸ್ತಿತ್ವ ಸ್ಥಾಪನೆಗೆ ತುದಿಗಾಲ ಮೇಲೆ ನಿಂತಿವೆ.
ಡಿ.22 ರಂದು 3,042 ಗ್ರಾಮ ಪಂಚಾಯತಿಗಳಿಗೆ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಇನ್ನುಳಿದ 2,720 ಗ್ರಾಪಂಗಳಿಗೆ ಡಿ.27 ರಂದು 2ನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದ ಚುನಾವಣೆಗೆ ಸೋಮವಾರದಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದ್ದು, ಡಿ.11 ರವರೆಗೆ ಉಮೇದುವಾರಿಕೆ ಸಲ್ಲಿಕೆಗೆ ಅವಕಾಶ ಇರಲಿದೆ. ಅದೇ ರೀತಿ ನಾಮಪತ್ರಗಳನ್ನು ಹಿಂಪಡೆಯಲು ಡಿ.14ರವರೆಗೆ ಕಾಲಾವಕಾಶ ಕೊಡಲಾಗಿದೆ. ಡಿ.22 ರ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದ್ದು, ಡಿ.30 ರಂದು ಫಲಿತಾಂಶ ಹೊರಬೀಳಲಿದೆ.
==

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ