ಪಟನಾ: ಬಿಹಾರ ವಿಧಾನಸಭೆಯಲ್ಲಿ ಬಿಜೆಪಿ – ಜೆಡಿಯು ಬಹುಮತ ಪಡೆದಿರುವ ಬೆನ್ನಲ್ಲೇ, ರಾಜ್ಯದ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದರ ಕುರಿತು ಎನ್ಡಿಎ ಭಾನುವಾರ ಮಧ್ಯಾಹ್ನ ಸಭೆ ನಡೆಸಲಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ.
ಭಾನುವಾರ ಮಧ್ಯಾಹ್ನ ಸುಮಾರು 12.30ಕ್ಕೆ ಸಭೆ ಆರಂಭವಾಗಲಿದ್ದು, ಪ್ರತಿಯೊಂದು ಸಂಗತಿ ಬಗ್ಗೆಯೂ ವಿವರವಾಗಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಸಭೆಯಲ್ಲಿ ತೆಗೆದುಕೊಳ್ಳುವ ಮಹತ್ವದ ನಿರ್ಧಾರಗಳ ಬಗ್ಗೆ ನಂತರ ಮಾಧ್ಯಮಕ್ಕೆ ತಿಳಿಸಲಾಗುವುದು ಎಂದು ನಿತೀಶ್ ಹೇಳಿದ್ದಾರೆ. ಎನ್ಡಿಎ ಮೈತ್ರಿಕೂಟಕ್ಕೆ ಒಟ್ಟು 125 ಸೀಟು ಲಭಿಸಿದ್ದು, ಈ ಪೈಕಿ ನಿತೀಶ್ ನೇತೃತ್ವದ ಜೆಡಿಯುಗೆ 43 ಸ್ಥಾನ ದೊರೆತಿದ್ದರೆ, ಬಿಜೆಪಿ 74 ಕ್ಷೇತ್ರದಲ್ಲಿ ಜಯಿಸಿದೆ.