ಡಬ್ಲ್ಯೂಎಚ್‍ಒನಿಂದ ದೇಶದಲ್ಲಿ ಜಾಗತಿಕ ಸಾಂಪ್ರದಾಯಿಕ ಔಷಧ ಕೇಂದ್ರ ಸ್ಥಾಪನೆ ಜಾಗತಿಕ ಸ್ವಾಸ್ಥ್ಯ ಕೇಂದ್ರವಾಗಿ ಭಾರತ

ಜಾಮ್‍ನಗರ್ (ಗುಜರಾತ್): ಭಾರತದಲ್ಲಿ ಸಾಂಪ್ರದಾಯಿಕ ಔಷಧದ ಜಾಗತಿಕ ಕೇಂದ್ರವನ್ನು ಸ್ಥಾಪಿಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‍ಒ) ಮುಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
ಜಾಮ್‍ನಗರದಲ್ಲಿ ನಿರ್ಮಿಸಲಾಗಿರುವ ಕಲಿಕಾ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಜೈಪುರದಲ್ಲಿನ ಆಯುರ್ವೇದ ರಾಷ್ಟ್ರೀಯ ಸಂಸ್ಥೆಯನ್ನು ವಿಡಿಯೋ ಕಾನರೆನ್ಸ್ ಮೂಲಕ ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಸಂಪ್ರದಾಯಿಕ ಔಷಧಗಳ ಬಗೆಗಿನ ಸಂಶೋಧನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಡಬ್ಲ್ಯೂಎಚ್‍ಒ ದೇಶದಲ್ಲಿ ಸಾಂಪ್ರದಾಯಿಕ ಔಷಧದ ಜಾಗತಿಕ ಕೇಂದ್ರವನ್ನು ಸ್ಥಾಪಿಸುತ್ತಿದೆ ಎಂದಿದ್ದಾರೆ.
ಭಾರತ ಜಾಗತಿಕ ಔಷಧಾಲಯವಾಗಿರುವಂತೆಯೇ ಸಾಂಪ್ರದಾಯಿಕ ಔಷಧದ ಈ ಕೇಂದ್ರವು ಸಹ ಜಾಗತಿಕ ಸ್ವಾಸ್ಥ್ಯದ ಕೇಂದ್ರವಾಗಿ ಹೊರಹೊಮ್ಮಲಿದೆ. ಅಲ್ಲದೆ, ಕೇಂದ್ರ ಔಷಗಳ ಅಭಿವೃದ್ಧಿ ಹಾಗೂ ಅದಕ್ಕೆ ಸಂಬಂಸಿದ ಸಂಶೋಧನೆಗಳನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಯುರ್ವೇದ ಮಾನವತೆ ಕಲ್ಯಾಣಕ್ಕೆ ಸಹಕಾರಿ
ಆಯುರ್ವೇದ ಭಾರತದ ಪರಂಪರೆಯಾಗಿದ್ದು, ಇದರ ವಿಸ್ತರಣೆಯು ಮಾನವತೆಯ ಕಲ್ಯಾಣಕ್ಕೆ ಸಹಕಾರಿಯಾಗಲಿದೆ. ನಮ್ಮ ಪಾರಂಪರಿಕ ಜ್ಞಾನವು ಇತರೆ ರಾಷ್ಟ್ರಗಳನ್ನೂ ಏಳಿಗೆಗೊಳಿಸುತ್ತಿದ್ದು, ಆಯುರ್ವೇದ ಬ್ರೆಜಿಲ್‍ನ ರಾಷ್ಟ್ರೀಯ ನೀತಿಯಲ್ಲಿ ಸೇರ್ಪಡೆಗೊಂಡಿದೆ ಎಂದು ಪ್ರಧಾನಿ ವಿವರಿಸಿದ್ದಾರೆ.
ಇದು ಆಯುರ್ವೇದ ಸಮಯವಾಗಿದ್ದು ಗುಜರಾತ್ ಮತ್ತು ರಾಜಸ್ಥಾನಕ್ಕಷ್ಟೇ ಅಲ್ಲದೆ, ಯುವ ಜನತೆಗೂ ವಿಶೇಷವಾಗಿದೆ.
ಆಯುರ್ವೇದ ಕಲಿಕಾ ಮತ್ತು ಸಂಶೋಧನಾ ಸಂಸ್ಥೆಯು ಜಾಮ್‍ನಗರಕ್ಕೆ ರಾಷ್ಟ್ರೀಯ ಮಾನ್ಯತೆಯನ್ನು ದೊರಕಿಸಲಿದೆ. ಅದೇ ರೀತಿ ಜೈಪುರದ ರಾಷ್ಟ್ರೀಯ ಆಯುರ್ವೇದ ಸಂಸ್ಥೆಯು ಸ್ವಾಯತ್ತ ವಿಶ್ವವಿದ್ಯಾಲಯವಾಗಿ ಸಮರ್ಪಣೆಯಾಗಲಿದೆ ಎಂದು ಮೋದಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ