ಮೊಗಾದಿಶು : ಸೊಮಾಲಿಯಾದ ಮೊಗಾದಿಶುದಲ್ಲಿ ಸಿಲುಕಿರುವ 33 ಭಾರತೀಯರನ್ನು ಮರಳಿ ದೇಶಕ್ಕೆ ಕರೆತರಲು ವಿದೇಶಾಂಗ ಸಚಿವಾಲಯ ಹಾಗೂ ಕಿನ್ಯಾದಲ್ಲಿರುವ ಭಾರತೀಯ ಹೈ ಕಮಿಷನ್ ಕಾರ್ಯಪ್ರವೃತ್ತವಾಗಿವೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ಕಳೆದ 8 ತಿಂಗಳಿಂದ ಸೊಮಾಲಿಯಾದ ಕಂಪನಿಯೊಂದು ಭಾರತದ 33 ಮಂದಿಯನ್ನು ಒತ್ತೆಯಾಳುಗಳನ್ನಾಗಿರಿಸಿಕೊಂಡಿದೆ ಎಂದು ವರದಿಯಾಗಿತ್ತು. ಈ ಹಿನ್ನೆಲೆ ಸಿಲುಕಿರುವವರನ್ನು ಪಾರು ಮಾಡಿ, ಸುರಕ್ಷಿತವಾಗಿ ಕರೆತರಲು ವಿದೇಶಾಂಗ ಸಚಿವಾಲಯ ಕಾರ್ಯಾಚರಣೆ ಆರಂಭಗೊಳಿಸಿದೆ.
ಕಿನ್ಯಾದ ರೈನೋಬಿಯಲ್ಲಿರುವ ಹೈ ಕಮಿಷನ್ ಅಕಾರಿಗಳು ಸೊಮಾಲಿಯಾ ಅಕಾರಿಗಳೊಂದಿಗೆ ಈ ವಿಚಾರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸೊಮಾಲಿಯಾ ರಾಯಭಾರ ಕಚೇರಿಯೊಂದಿಗೆ ನಾವು ನಿಕಟ ಸಂಪರ್ಕದಲ್ಲಿದ್ದೇವೆ. ಶೀಘ್ರವೇ 33 ಮಂದಿಯನ್ನು ಮರಳಿ ಕರೆತರುತ್ತೇವೆ ಎಂದು ಸಚಿವ ಟ್ವೀಟ್ ಮಾಡಿ ಭರವಸೆ ನೀಡಿದ್ದಾರೆ.