ಇಸ್ಲಮಾಬಾದ್, ಡಿ.17- ರಾಷ್ಟ್ರದ್ರೋಹ ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಹಾಗೂ ಮಾಜಿ ರಾಷ್ಟ್ರಾಧ್ಯಕ್ಷ ಫರ್ವೇಜ್ ಮುಷರಫ್ ಅವರಿಗೆ ಇಲ್ಲಿನ ವಿಶೇಷ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ಇಂದು ಪೇಶಾವರ್ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶ ವಗಾರ್ ಅಹಮ್ಮದ್ ಸೇಠ್ ಅವರ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ಮುಷರಫ್ ಅಪರಾಧಿ ಎಂದು ಘೋಷಿಸಿ ಗಲ್ಲುಶಿಕ್ಷೆ ವಿಧಿಸಿದೆ.
ಕಳೆದ 2007 ನವೆಂಬರ್ನಲ್ಲಿ ಪಾಕಿಸ್ತಾನದಲ್ಲಿ ವಿಶೇಷ ತುರ್ತು ಪರಿಸ್ಥಿತಿ ಘೋಷಿಸಿ ರಾಷ್ಟ್ರದ್ರೋಹವೆಸಗಿದ್ದಾರೆ ಎಂದು ನ್ಯಾಯಾಲಯ ತೀರ್ಪು ನೀಡಿ ಮುಷರಫ್ ಅವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದೆ.
ಕಳೆದ 2013ರಲ್ಲಿ ಮುಷರಫ್ ವಿರುದ್ಧ ಈ ಸಂಬಂಧ ಹಲವು ಪ್ರಕರಣಗಳನ್ನು ಹೂಡಲಾಗಿತ್ತು. ಅಂದಿನಿಂದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿತ್ತು.
2016ರಲ್ಲಿ ವಿಶೇಷ ನ್ಯಾಯಾಲಯಕ್ಕೆ ಮುಷರಫ್ ಅರ್ಜಿ ಸಲ್ಲಿಸಿ ತನ್ನ ಮೇಲಿನ ಎಲ್ಲ ದೂರುಗಳನ್ನು ರದ್ದುಪಡಿಸಬೇಕೆಂದು ಮನವಿ ಸಲ್ಲಿಸಿ ನಂತರ ವೈದ್ಯಕೀಯ ಚಿಕಿತ್ಸೆಗೆಂದು ದುಬೈಗೆ ತೆರಳಿದ್ದರು.
ಮುಷರಫ್ ಅವರ ಎಲ್ಲ ಮನವಿಗಳೂ ತಿರಸ್ಕಾರಗೊಂಡಿದ್ದು, ರಾಷ್ಟ್ರದ್ರೋಹದ ಆರೋಪದ ಮೇಲೆ ಅವರಿಗೆ ಗಲ್ಲುಶಿಕ್ಷೆ ಜಾರಿಯಾಗಿದೆ.
ಪ್ರಸ್ತುತ ಮುಷರಫ್ ಇನ್ನೂ ದುಬೈನಲ್ಲೇ ಇರುವುದರಿಂದ ಗಲ್ಲುಶಿಕ್ಷೆಯನ್ನು ಜಾರಿಗೊಳಿಸುವ ಬಗ್ಗೆ ಪಾಕಿಸ್ತಾನ ರಾಜತಾಂತ್ರಿಕವಾಗಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಭಾರೀ ಸಂಖ್ಯೆಯಲ್ಲಿ ವಕೀಲರು ಜಮಾಯಿಸಿದ್ದರು. ಇಡೀ ದೇಶದ ಗಮನ ನ್ಯಾಯಾಲಯದ ತೀರ್ಪಿನ ಕಡೆಯೇ ಕೇಂದ್ರೀಕೃತವಾಗಿತ್ತು.
ವಿಶೇಷ ನ್ಯಾಯಾಲಯಕ್ಕೆ ಮುಷರಫ್ ಅರ್ಜಿ ಸಲ್ಲಿಸಿ ತನ್ನ ಮೇಲಿನ ಎಲ್ಲ ದೂರುಗಳನ್ನು ರದ್ದುಪಡಿಸಬೇಕೆಂದು 2016ರಲ್ಲಿ ಮನವಿ ಸಲ್ಲಿಸಿದ್ದರು. ನಂತರ ವೈದ್ಯಕೀಯ ಚಿಕಿತ್ಸೆಗಾಗಿ ದುಬೈಗೆ ತೆರಳಿದ್ದರು.
ಇಂದು ಪೇಶಾವರ್ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶ ವಗಾರ್ ಅಹಮ್ಮದ್ ಸೇಠ್ ಅವರ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ಮುಷರಫ್ ಅಪರಾಧಿ ಎಂದು ಘೋಷಿಸಿದೆ.
ಪ್ರಸ್ತುತ ಮುಷರಫ್ ಇನ್ನೂ ದುಬೈನಲ್ಲೇ ಇರುವುದರಿಂದ ಗಲ್ಲುಶಿಕ್ಷೆಯನ್ನು ಜಾರಿಗೊಳಿಸುವ ಬಗ್ಗೆ ಪಾಕಿಸ್ತಾನ ರಾಜತಾಂತ್ರಿಕವಾಗಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ವಕೀಲರು ಜಮಾಯಿಸಿದ್ದರು. ಇಡೀ ದೇಶ ಇದರ ಬಗ್ಗೆಯೇ ಕೇಂದ್ರೀಕೃತವಾಗಿತ್ತು.