ಜನವರಿಯಲ್ಲಿ ಭಾರತ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯಾ ಕ್ರಿಕೇಟ್ ತಂಡ

ಮೆಲ್ಬೋರ್ನ್, ಡಿ.17-ಮುಂದಿನ ಜನವರಿಯಲ್ಲಿ ಭಾರತ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯಾ ಏಕದಿನ ತಂಡವನ್ನು ಪ್ರಕಟಿಸಲಾಗಿದೆ.

ವಿಶೇಷವೆಂದರೆ ಈ ಬಾರಿ ಆಸ್ಟ್ರೇಲಿಯಾದ ದಿಗ್ಗಜ ಆಟಗಾರರನ್ನೇ ಕೈಬಿಡಲಾಗಿದ್ದು, ಪ್ರಮುಖವಾಗಿ ಸ್ಫೋಟಕ ಬ್ಯಾಟ್ಸ್‍ಮೆನ್ ಗ್ಲೇನ್ ಮ್ಯಾಕ್ಸ್‍ವೆಲ್, ಉಸ್ಮಾನ್ ಕವಜಾ ಮತ್ತು ಶಾನ್ ಮಾರ್ಷ್, ಲಯಾನ್ ಅವರನ್ನು ಕೈ ಬಿಡಲಾಗಿದೆ.

ಆಲ್ ರೌಂಡರ್ ಆಟಗಾರ ಶೇನ್ ಅಬೋರ್ಟ್ ಅವರನ್ನು ಐದು ವರ್ಷಗಳ ನಂತರ ಮತ್ತೆ ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ. ಇದಲ್ಲದೆ, ಮೊದಲ ಬಾರಿಗೆ ಮಾರ್ನಸ್ ಲ್ಯಾಬ್ಸರ್ಗೀನ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಕಳೆದ ವರ್ಷವಷ್ಟೇ ಟೆಸ್ಟ್ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದ ಈ ಉದಯೋನ್ಮುಖ ಆಟಗಾರನಿಗೆ ಭಾರತದ ನೆಲದಲ್ಲಿ ಉತ್ತಮ ಆಟ ಪ್ರದರ್ಶಿಸುವ ವಿಶ್ವಾಸದೊಂದಿಗೆ ಆಯ್ಕೆಗಾರರು ಸ್ಥಾನ ಕಲ್ಪಿಸಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್‍ನ ಮುಖ್ಯ ಆಯ್ಕೆಗಾರ ಹಾನ್ಸ್ ತಂಡವನ್ನು ಪ್ರಕಟಿಸಿ ಮಾತನಾಡಿ, ಮ್ಯಾಕ್ಸ್‍ವೆಲ್ ಅವರು ಅದ್ಭುತವಾದ ಫಾರ್ಮ್‍ನಲ್ಲಿದ್ದಾರೆ. ಇತ್ತೀಚೆಗೆ ಅವರು ಮಾನಸಿಕ ಒತ್ತಡದಲ್ಲಿ ಸಿಲುಕಿ ಪಂದ್ಯಗಳಿಂದ ದೂರವಿದ್ದರು. ಆದರೆ ಈಗ ದೇಶೀಯ ಕ್ರಿಕೆಟ್‍ಗೆ ಮರಳಿದ್ದಾರೆ. ಅವರಿಗೆ ಇನ್ನಷ್ಟು ವಿಶ್ರಾಂತಿಯ ಅಗತ್ಯವಿದೆ. ಅದಕ್ಕಾಗಿ ಅವರನ್ನು ಭಾರತ ಪ್ರವಾಸಕ್ಕೆ ಆಯ್ಕೆ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರ ನೇತೃತ್ವದಲ್ಲಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಆಗಮಿಸಿದ್ದು, ಮುಂಬೈನಲ್ಲಿ ಮೊದಲ ಏಕದಿನ ಪಂದ್ಯ ಜ.14 ರಂದು ರಾಜ್‍ಕೋಟ್‍ನಲ್ಲಿ , ಜ.17 ಮತ್ತು ಬೆಂಗಳೂರಿನಲ್ಲಿ ಜ.19 ರಂದು ಪಂದ್ಯಗಳು ನಡೆಯಲಿವೆ.

ಆಸ್ಟ್ರೇಲಿಯಾ ತಂಡ: ಆರನ್ ಫಿಂಚ್ (ನಾಯಕ), ಸೀನ್ ಅಬಾಟ್, ಆಷ್ಟನ್ ಅರ್ಗ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮ್ಮಿನ್, ಲ್ಯಾಬಸ್ಚೇಜ್, ಕೇನ್ ರಿಚಡ್ರ್ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಆಷ್ಟನ್ ಟನರ್, ಡೇವಿಡ್ ವಾರ್ನರ್, ಆಡಮ್ ಜಂಪಾ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ