ನ್ಯಾಯಲಯಕ್ಕೆ ಹಾಜರಾದ ಮಾಜಿ ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು,ಡಿ.10- ಐಟಿ ದಾಖಲಿಸಿದ್ದ 4ನೇ ಪ್ರಾಸಿಕ್ಯೂಷನ್ ವಿಚಾರಣೆಗೆ ಇಂದು ಸಿಟಿ ಸಿವಿಲ್ ಆವರಣದಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಆಪ್ತರು ಹಾಜರಾಗಿದ್ದರು.

ಅಧೀನ ನ್ಯಾಯಲಯದಲ್ಲಿ ನಡೆಯುತ್ತಿರುವ 4ನೇ ಪ್ರಾಸಿಕ್ಯೂಷನ್ ವಿಚಾರಣೆ ರದ್ದು ಕೋರಿ ಡಿಕೆಶಿ ಹಾಗೂ ಆಪ್ತರು ಹೈಕೋರ್ಟ್?ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನ ಕೆಲ ದಿನಗಳ ಹಿಂದೆ ಹೈಕೋರ್ಟ್ ವಜಾ ಮಾಡಿತ್ತು.

ಹೀಗಾಗಿ ಅಧೀನ ನ್ಯಾಯಲಯದಲ್ಲಿ ವಿಚಾರಣೆ ನಡೆಯುತ್ತಿದೆ.ಇನ್ನು ನ್ಯಾಯಲಯದ ವಿಚಾರಣೆ ವೇಳೆ ಡಿ.ಕೆ.ಶಿವಕುಮಾರ್ ಪರ ವಕೀಲರು, ಹೈಕೋರ್ಟ್ ಆದೇಶ ಪ್ರಶ್ನಿಸಿ ನಾಲ್ಕನೇ ಆರೋಪಿ ಆಂಜನೇಯ ಹನುಮಂತಯ್ಯ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಹೀಗಾಗಿ ಒಂದು ತಿಂಗಳು ವಿಚಾರಣೆಗೆ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಗರಂ ಆದ ನ್ಯಾಯಾಧೀಶರು, ಸುಪ್ರೀಂನಲ್ಲಿ ಯಾವಾಗ ವಿಚಾರಣೆಗೆ ಬರುತ್ತೆ ಎಂದು ಪ್ರಶ್ನಿಸಿದರು. ಮುಂದಿನ ವಾರ ಬರುತ್ತೆ ಎಂದು ಡಿಕೆಶಿ ಪರ ವಕೀಲರು ಉತ್ತರಿಸಿದರು. ಇದಕ್ಕೆ ನ್ಯಾಯಾಧೀಶರು ಡಿಸೆಂಬರ್? 20ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ