ರಾಂಚಿ: ಜಾರ್ಖಂಡ್ ವಿಧಾನಸಭೆಯ ಮೊದಲ ಹಂತದ ಚುನಾವಣೆ ಶನಿವಾರ ಬೆಳಗ್ಗೆ ಮತದಾನ ಆರಂಭಗೊಂಡಿದೆ. ಮತ್ತೊಂದೆಡೆ ಗುಮ್ಲಾ ಜಿಲ್ಲೆಯ ಬಿಷ್ಣುಪುರ್ ನಲ್ಲಿ ಸೇತುವೆಯನ್ನು ನಕ್ಸಲೀಯರು ಸ್ಫೋಟಿಸಿರುವ ಘಟನೆ ನಡೆದಿದೆ. ಘಟನೆಯಲ್ಲಿ ಯಾವುದೇ ಸಾವು ನೋವು, ಸಂಭವಿಸಿಲ್ಲ. ಮತದಾನಕ್ಕೂ ಯಾವುದೇ ತೊಂದರೆಯಾಗಿಲ್ಲ ಎಂದು ಡೆಪ್ಯುಟಿ ಕಮಿಷನರ್ ಶಶಿ ರಂಜನ್ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಜಾರ್ಖಂಡ್ ನ ಆರು ಜಿಲ್ಲೆಯ 13 ಕ್ಷೇತ್ರಗಳಿಗೆ ಇಂದು ಬೆಳಗ್ಗೆ ಮತದಾನ ಆರಂಭಗೊಂಡಿದೆ. 15 ಮಹಿಳೆಯರು ಸೇರಿದಂತೆ 189 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
2014ರಲ್ಲಿ ಬಿಜೆಪಿ 35 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್(5 ಸ್ಥಾನ ಗೆದ್ದಿತ್ತು) ಜತೆ ಸೇರಿ ಬಿಜೆಪಿ ಸರ್ಕಾರ ರಚಿಸಿತ್ತು. ಈ ಬಾರಿ ಎಜೆಎಸ್ ಯು ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ.