ಮಹಾರಾಷ್ಟ್ರ: ಬಹುಮತ ಸಾಬೀತಿಗೂ ಮೊದಲು ಅಜಿತ್ ಪವಾರ್ ಭೇಟಿಯಾದ BJP ಸಂಸದ!

ಮುಂಬೈ: ಇಂದು ಮಧ್ಯಾಹ್ನ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಮ್ಮ ಸರ್ಕಾರದ ಬಹುಮತ ಸಾಬೀತು ಪಡಿಸಲು ಸಜ್ಜಾಗುತ್ತಿದ್ದಾರೆ. ಇನ್ನೊಂದೆಡೆ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರನ್ನು ನಂದೇಡ್‌ನ  ಸಂಸದ ಪ್ರತಾಪ್ ರಾವ್ ಭೇಟಿಯಾಗಿದ್ದಾರೆ. ಶನಿವಾರ ಮಧ್ಯಾಹ್ನ ವಿಧಾನಸಭೆಯಲ್ಲಿ ಉದ್ಧವ್ ಸರ್ಕಾರ ತನ್ನ ಬಹುಮತವನ್ನು ಸಾಬೀತುಪಡಿಸುವ ಕೆಲವೇ ಗಂಟೆಗಳ ಮೊದಲು ಈ ಸಭೆ ನಡೆಯಿತು.

ಸಭೆಯ ನಂತರ, ಅಜಿತ್ ಪವಾರ್ ಇದು ಸದ್ಭಾವನೆಯ ಅರ್ಪಣೆಯಾಗಿದೆ. ಇಂತಹ ಸಭೆಗಳು ರಾಜಕೀಯದಲ್ಲಿ ನಡೆಯುತ್ತವೆ. ಒಂದು ಪಕ್ಷದವರು ಇನ್ನೊಂದು ಪಕ್ಷದವರನ್ನು ಭೇಟಿಯಾಗುವುದು ಸಾಮಾನ್ಯ. ಇದಕ್ಕೆ ವಿಶೇಷಾರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದರು.

ಉದ್ಧವ್ ಸರ್ಕಾರದ ಬಹುಮತ ಸಾಬೀತು, ಹೊಸ ಸ್ಪೀಕರ್ ಆಯ್ಕೆ, ವಿರೋಧ ಪಕ್ಷದ ಮುಖಂಡರ ಘೋಷಣೆ ಮತ್ತು ರಾಜ್ಯಪಾಲರ ಭಾಷಣಕ್ಕಾಗಿ ಮಹಾರಾಷ್ಟ್ರ ವಿಧಾನಸಭೆಯ ಎರಡು ದಿನಗಳ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತಕ್ಕೆ 145 ಶಾಸಕರ ಬೆಂಬಲದ ಅಗತ್ಯವಿದೆ. ಆಡಳಿತಾರೂಢ ಶಿವಸೇನೆ-ಕಾಂಗ್ರೆಸ್-ಎನದ ಸಿಪಿ ‘ಮಹಾ ವಿಕಾಸ್ ಅಘಾಡಿ’ ಸರ್ಕಾರ ತನಗೆ 170 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದೆ.

ಇಂದು ವಿಧಾನಸಭೆಯಲ್ಲಿ ಏನಾಗಲಿದೆ?
ವಿಧಾನಸಭೆಯ ಪ್ರಕ್ರಿಯೆಗಳು ಶನಿವಾರ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗಲಿವೆ. ಮೊದಲು ಸದನದಲ್ಲಿ ಹಂಗಾಮಿ ಸ್ಪೀಕರ್ ಹೆಸರನ್ನು ಪ್ರಕಟಿಸಲಾಗುವುದು. ಪ್ರೊಟೆಮ್ ಸ್ಪೀಕರ್ ಆದೇಶದ ನಂತರ, ಶಿವಸೇನೆಯ ಉದ್ಧವ್ ಠಾಕ್ರೆ ಸರ್ಕಾರದ ಸಂಪುಟದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಹೊಸ ಮಂತ್ರಿಗಳನ್ನು ಮೊದಲು ಸದನದಲ್ಲಿ ಪರಿಚಯಿಸಲಾಗುವುದು.

ಅದರ ನಂತರ, ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರು ಮಹಾರಾಷ್ಟ್ರ ಸದನದಲ್ಲಿ ಹೊಸ ಪ್ರೋಟೀಮ್ ಸ್ಪೀಕರ್ ಸಮ್ಮುಖದಲ್ಲಿ ಸರ್ಕಾರದ ಬಹುಮತವನ್ನು ಸಾಬೀತು ಪಡಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ