ಬೆಂಗಳೂರು: ಮಧ್ಯಪ್ರದೇಶವನ್ನೇ ಮೀರಿಸುವಂತಿದೆ ಕರ್ನಾಟಕದ ಹನಿಟ್ರ್ಯಾಪ್ ಕೇಸ್. ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದಂತೆಯೇ ಸ್ಫೋಟಕ ಸತ್ಯಗಳು ಬಹಿರಂಗವಾಗುತ್ತಿವೆ.
ಶಾಸಕರನ್ನು ಖೆಡ್ಡಾಕ್ಕೆ ಬೀಳಿಸಲು 200ಕ್ಕೂ ಹೆಚ್ಚು ನಟಿಯರ ಬಳಕೆ ಮಾಡಿಕೊಂಡಿದ್ದು, ಕಿರುತೆರೆ ನಟಿಯರೇ ಆರೋಪಿ ರಾಘವೇಂದ್ರನ ಟಾರ್ಗೆಟ್ ಎಂಬುದು ಬಯಲಾಗಿದೆ. ಅವಕಾಶ ಸಿಗದ ನಟಿಯರಿಗೆ ಖೆಡ್ಡಾ ತೊಡುವ ಮೂಲಕ ರಾಜಕಾರಣಿಗಳನ್ನು ಬಳಸಿಕೊಂಡು ಆರೋಪಿ ಹನಿ ಟ್ರ್ಯಾಪ್ ನಡೆಸುತ್ತಿದ್ದನು ಎಂಬ ಮಾಹಿತಿ ಲಭ್ಯವಾಗಿದೆ.
ಪೆನ್ಡ್ರೈವ್ನಲ್ಲಿ ಕೆಲವೊಂದು ಸ್ಫೋಟಕ ವಿಡಿಯೋ ಲಭ್ಯವಾಗಿದ್ದು, ಇದರಲ್ಲಿ ಕೆಲವು ಶಾಸಕರ ಖಾಸಗಿ ದೃಶ್ಯಗಳಿವೆ. ಕೆಲವೊಂದನ್ನು ದೃಶ್ಯಗಳನ್ನು ಈಗಾಗಲೇ ಡಿಲೀಟ್ ಮಾಡಲಾಗಿದೆ. ಈ ವಿಡಿಯೋಗಳ ನಕಲಿ ಪ್ರತಿಗಳ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಅಲ್ಲದೆ ಈ ವಿಡಿಯೋಗಳು ಎಲ್ಲಿದೆ ಎಂಬುದೂ ಸಿಕ್ಕಿಲ್ಲ. ಪೆನ್ ಡ್ರೈವ್, ಹಾರ್ಡ್ ಡಿಸ್ಕ್ ಮೊಬೈಲ್ಗಳಲ್ಲಿ ರಾಸಲೀಲೆ ಮಾಹಿತಿಗಳಿವೆ. ರಾಘವೇಂದ್ರನ ಮೊಬೈಲ್ಗಳಲ್ಲಿ ಹನಿಟ್ರ್ಯಾಪ್ ದೃಶ್ಯಾವಳಿಗಳು ದೊರೆತಿವೆ. ಶಾಸಕರು, ಸಂಸದರ ನೀಲಿಚಿತ್ರ ನೋಡಿ ಪೊಲೀಸರೇ ದಂಗಾಗಿದ್ದಾರೆ.
ರಾತ್ರಿ 10 ಗಂಟೆ ನಂತರ ಜನಪ್ರತಿನಿಧಿಗಳಿಗೆ ಕರೆ ಮಾಡಿ ಮಧ್ಯರಾತ್ರಿವರೆಗೆ ಅವರ ಜೊತೆ ಚೆಲ್ಲಾಟವಾಡುತ್ತಾರೆ. ಕುಡಿದ ಮತ್ತಿನಲ್ಲಿದ್ದ ಶಾಸಕರನ್ನು ಹನಿಟ್ರ್ಯಾಪ್ ಟೀಂ ಖೆಡ್ಡಾಗೆ ಬೀಳಿಸುತ್ತಿತ್ತು. ಮೊದಲು ಮಾತು ಆರಂಭಿಸಿ, ಆಮೇಲೆ ದೈಹಿಕ ಸಂಬಂಧಗಳ ಸಂಭಾಷಣೆ ನಡೆಸುತ್ತಿತ್ತು. ಒಬ್ಬರು ಮಾತಿನಲ್ಲಿ ಮಾತನಾಡಿ ಪ್ರೇರೆಪಿಸುತ್ತಿದ್ದರು. ಇನ್ನೊಬ್ಬರು ಹನಿಟ್ರ್ಯಾಪ್ಗೆ ಇಳಿಯುತ್ತಿದ್ದರು. ಹನಿಟ್ರ್ಯಾಪ್ಗೆ ಬೀಳಿಸಲು ಕಿರುತೆರೆ ನಟಿಯರು ತಮ್ಮ ಕೆಲವೊಂದು ಖಾಸಗಿ ದೃಶ್ಯಗಳನ್ನು ಶಾಸಕರ ಮೊಬೈಲ್ಗೆ ರವಾನೆ ಮಾಡುತ್ತಿದ್ದರು. ಈ ದೃಶ್ಯಗಳನ್ನು ನೋಡಿ ರಾಜಕಾರಣಿಗಳು ಪ್ರೇರೇಪಿತರಾಗುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ.