ಬೆಂಗಳೂರು,ನ.14-ಡಾ.ಅಂಬರೀಶ್ ಅವರ ಒಂದನೇ ಪುಣ್ಯತಿಥಿ ಅಂಗವಾಗಿ ಇಂದು ನಗರದ ಕಂಠೀರವ ಸ್ಟುಡಿಯೋದಲ್ಲಿ ಅವರ ಸ್ಮಾರಕದಲ್ಲಿ ಪೂಜೆ ಸಲ್ಲಿಸಲಾಯಿತು.
ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ದರ್ಶನ್, ರಾಕ್ಲೈನ್ ವೆಂಕಟೇಶ್ ಮತ್ತಿತರರು ಅಂಬರೀಶ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸುಮಲತಾ, ಒಂದು ವರ್ಷ ಎಷ್ಟು ಬೇಗ ಕಳೆದಿದೆ. ಎಲ್ಲೇ ಹೋದರೂ ಅವರ ನೆನಪು ಮರುಕಳಿಸುತ್ತದೆ ಎಂದರು.
ನಾವಿಂದು ಹೀಗಿರಲು ಅವರ ಮಾರ್ಗದರ್ಶನ, ಅವರು ಹಾಕಿಕೊಟ್ಟ ದಾರಿಯೇ ಕಾರಣ. ಅವರ ಪುಣ್ಯತಿಥಿ ಅಂಗವಾಗಿ ಇಂದು ಪೂಜೆ ಸಲ್ಲಿಸಲಾಗಿದೆ ಎಂದ ಅವರು, ರಾಜಕೀಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.
ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಅಂಬರೀಶ್ ಒಂದನೇ ಪುಣ್ಯತಿಥಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅವರ ಸಂಬಂಧಿಕರು, ಕಲಾವಿದರು, ಆತ್ಮೀಯರು, ಅಭಿಮಾನಿಗಳು ಪಾಲ್ಗೊಂಡಿದ್ದರು.