ಕಂದಕಕ್ಕೆ ಉರುಳಿಬಿದ್ದ ಬಸ್-ದುರಂತದಲ್ಲಿ 16 ಮಂದಿ ಸಾವು

ಜಮ್ಮು, ನ.13- ಕಿಕ್ಕಿರಿದು ತುಂಬಿದ್ದ ಮಿನಿ ಬಸ್ ಕಡಿದಾದ ರಸ್ತೆ ತಿರುವಿನಲ್ಲಿ ಉರುಳಿ ಆಳವಾದ ಕಣಿವೆಗೆ ಬಿದ್ದ ಪರಿಣಾಮ 16 ಮಂದಿ ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ಜಮ್ಮುವಿನ ದೋಡಾ ಬಳಿ ಸಂಭವಿಸಿದೆ.

ಈ ದುರಂತದಲ್ಲಿ ನಾಲ್ವರು ಮಕ್ಕಳು, ಮೂವರು ಮಹಿಳೆಯರು ಸೇರಿ 16 ಮಂದಿ ಅಸುನೀಗಿದ್ದಾರೆ. ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ದೋಡಾ ಪೋಲೀಸ್ ವರಿಷ್ಠಾಧಿಕಾರಿ ಮಮ್ತಾಜ್ ಅಹಮ್ಮದ್ ಹುಸೇನ್ ತಿಳಿಸಿದ್ದಾರೆ.

ಭತೋಟಿ-ದೋಡಾ ಹೆದ್ದಾರಿಯಲ್ಲಿ ಮಿನಿ ಬಸ್ ಚಾಲಕನ ನಿಯಂತ್ರಣ ತಪ್ಪಿ 500 ಅಡಿ ಆಳದ ಕಮರಿಗೆ ಉರುಳಿತು. ಈ ಘಟನೆಯಲ್ಲಿ 16 ಮಂದಿ ಮೃತಪಟ್ಟರು ಎಂದು ಅವರು ಹೇಳಿದ್ದಾರೆ.

ಹನ್ನೊಂದು ಜನರನ್ನು ಹೊತ್ತೊಯ್ಯುವ ಸಾಮಥ್ರ್ಯವಿದ್ದ ಮಿನಿಬಸ್‍ನಲ್ಲಿ 17ಮಂದಿ ಕಿಕ್ಕಿರಿದಿದ್ದರಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ