ನವದೆಹಲಿ: ಅನರ್ಹ ಶಾಸಕರಿಗೆ ಮುಂಬರುವ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಮ್ ಕೋರ್ಟ್ ಅವಕಾಶ ನೀಡಿದೆ.
ಕಳೆದ ಕೆಲವು ದಿನಗಳ ಹಿಂದೆಯಷ್ಟೆ ತೀರ್ಪು ಕಾಯ್ದಿರಿಸಿದ್ದ ಘನ ನ್ಯಾಯಾಲಯ ಬುಧವಾರ ನ್ಯಾ,ರಮಣ ನೇತೃತ್ವದ ತ್ರಿಸದಸದಸ್ಯ ನೇತೃತ್ವದ ಪೀಠ ಸ್ಪೀಕರ್ ಆದೇಶವನ್ನ ಎತ್ತಿ ಹಿಡಿಯಿತು. ಆದರೆ ಪ್ರಕಟಿಸಿದೆ. ಅದ್ರೆ ವಿಧಿಸಿದ್ದ ಕಾಲಮೀತಿಯನ್ನ ತಳ್ಳಿ ಹಾಕಿದೆ. ಶಾಸಕರು ಸ್ವಾಇಚ್ಛೆಯಿಂದ ರಾಜೀನಾಮೆ ಕೊಟ್ಟಾಗ ಸ್ಪೀಕರ್ ಸ್ವೀಕರಿಸಬೇಕು. ಅನರ್ಹರು ಮರು ಆಯ್ಕೆಯಾಗುವವತೆಗೂ ಮಂತ್ರಿ ಸ್ಥಾನವನ್ನ ಅಲಂಕರಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಕುದುರೆ ಪ್ರ ವ್ಯಾಪಾರ ಪ್ರಜಾಪ್ರಭುತ್ವಕ್ಕೆ ಮಾರಕ. ಅನರ್ಹರ ನಡೆಯನ್ನ ನಾವು ಪ್ರೋತ್ಸಾಹಿಸುವುದಿಲ್ಲ. ಆದರೆ ಶಾಸಕರ ರಾಜೀನಾಮೆಯನ್ನ ಅಂಗೀಕರಿಸಬೇಕು. ಆಡಳಿತ, ವಿಪಕ್ಷಗಳಿಗೆ ಎರಡಕ್ಕೂ ನೈತಿಕತೆ ಇರಬೇಕು.
ಅನರ್ಹ ಶಾಸಕರು ಸಕಾರಣದಿಂದ ರಾಜೀನಾಮೆ ಎಂದು ತೃಪ್ತಿಯಾದ್ರೆ ಶಾಸಕರ ರಾಜೀನಾಮೆಯನ್ನಸ್ಪೀಕರ್ ಅಂಗೀಕರಿಸಬೇಕು ಎಂದು ಸುಪ್ರೀಮ್ ಹೇಳಿದೆ.
ಅನರ್ಹರು ಸಲ್ಲಿಸಿರುವ ಅರ್ಜಿ ಕಾನೂನು ಬದ್ಧವಾಗಿದೆ. ಸಭಾಧ್ಯಕರ ಆದೇಶವನ್ನ ರದ್ದು ಮಾಡಿದೆ.ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ. ಚುನಾವಣೆಯಲ್ಲಿ ನಿಲ್ಲಬಹುದಾಗಿದೆ. ವಿಧಾನ ಸಭೆ ಅಂತ್ಯದವರೆಗೂ ಇವರು ಅನರ್ಹರಲ್ಲ ಎಂದು ಪೀಠ ಹೇಳಿದೆ.
ಸಂಸದೀಯ ವ್ಯವಸ್ಥೆಯಲ್ಲಿ ನೈತಿಕತೆ ಮುಖ್ಯ ಸ್ಪೀಕರ್ ರಾಜಕೀಯ ಪ್ರೇರಿತ ಕ್ರಮವನ್ನ ಸ್ಪೀಕರ್ ತೆಗೆದುಕೊಳ್ಳಬಾರದು.
ಅವಧಿ ಮುಗಿಯುವವರೆಗೂ ಸ್ಪೀಕರ್ ಅನರ್ಹಗೊಳಿದುವಂತಿಲ್ಲ ಕೋರ್ಟ್ ಹೇಳಿದೆ.
ಸುಪ್ರೀಮ್ ತೀರ್ಪನ್ನ ನಾವು 17 ಅನರ್ಹ ಶಾಸಕರು ಸ್ವಾಗತಿಸುತ್ತೇವೆ. ಯಾವ ಸ್ಪೀಕರ್, ಜೆಡಿಎಸ್ ಮತ್ತು ಕಾಂಗ್ರೆಸ್ ನಮ್ಮನ್ನ ರಾಜಕೀಯದಿಂದ ದೂರ ಇಡಲು ಹುನ್ನಾರ ಮಾಡಿದ್ರೊ ಅದನ್ನ ಸುಪ್ರೀಮ್ ಕೋರ್ಟ್ ತಡೆದಿದೆ. ನಾವು ಮತ್ತೆ ಜನರ ಆರ್ಶೀವಾದೊಂದಿಗೆ ಮತ್ತೆ ಗೆದ್ದು ಬರುತ್ತೇವೆ ಎಂದು ಅನರ್ಹ ಶಾಸಕ ವಿಶ್ವನಾಥ್ ಹೇಳಿದ್ದಾರೆ.
ಸುಪ್ರೀಮ್ ತೀರ್ಪು ಹೊರ ಬೀಳುತ್ತಿದ್ದಂತೆ ಇತ್ತ ಸಿಎಂ ಯಡಿಯೂರಪ್ಪ ಅನರ್ಹ ಶಾಸಕರ ಜೊತೆ ನಗು ಮುಖದಿಂದಲೇ ಮಾತನಾಡಿದ್ದಾರೆ.ಸುಪ್ರೀಮ್ ತೀರ್ಪನ್ನ ಸ್ವಾಗತಿಸುತ್ತೇನೆ.ತೃಪ್ತಿತರದಾಯಕವಾಗಿರದಿದ್ದರೂ ನಮಗೆ ಸ್ಪೀಕರ್ ಕೊಟ್ಟಿದ್ದ ತಪ್ಪು ಆದೇಶವನ್ನ ರದ್ದು ಮಾಡಿದೆ. ನನ್ನ ಕ್ಷೇತ್ರದ ಜನತೆ ಮತ್ತೆ ನನ್ನ ಕೈಯಿಡಿಯಲಿದ್ದಾರೆ. ನಾನು ಖಂಡಿತವಾಗಿ ಗೆಲ್ತೆನೆ ಎಂದು ಅನರ್ಹ ಶಾಸಕ ಬಿ.ಸಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಅನರ್ಹರ ಪರ ತೀರ್ಪು ಬರುತ್ತಿದ್ದಂತೆ ಬೆಳಗಾವಿ ಮತ್ತು ಕಾರವಾರದಲ್ಲಿ ಅನರ್ಹ ಶಾಸಕರ ಪರ ಕಾರ್ಯಕರ್ತರು ಪಟಾಕಿ ಸಿಡಿಸಿ ಮತ್ತು ಸಿಹಿ ಹಂಚಿ ಸಂಭ್ರಮಿಸಿದ್ರು.
ಸುಪ್ರೀಮ್ ಕೋರ್ಟ್ ತೀರ್ಪನ್ನ ಸ್ವಾಗತಿಸುತ್ತೇವೆ,ಉಪಚುನಾವಣೆಯಲ್ಲಿ ಗೆದ್ದೆ ಗೆಲ್ತೆವೆ. ನಾಳೆಯಿಂದಲೇ 17 ಕ್ಷೇತ್ರದ ಶಾಸಕರ ಕ್ಷೇತ್ರಗಳಿಗೆ ತೆರೆಳಿ ಪ್ರಚಾರ ಆರಂಭಿಸುತ್ತೇವೆ. ಒಂದೊಂದು ಕ್ಷೇತ್ರಗಳಿಗೆ ಒಬ್ಬಬ್ಬ ಸಚಿರನ್ನ ನೇಮಿಸುತ್ತೇವೆ ಎಂದು ಸಿಎಮ್ ಯಡಿಯೂರಪ್ಪ ಹೇಳಿದ್ದಾರೆ.
ನನ್ನ ತೀರ್ಪನ್ನ ಎತ್ತಿ ಹಿಡಿದಿರೋದು ಖುಷಿ ತಂದಿದೆ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಹೇಳಿದ್ದಾರೆ.
ಸುಪ್ರೀಮ್ ತೀರ್ಪನ್ನ ನಾವು ಸ್ವಾಗತಿಸುತ್ತೇವೆ. ಅರ್ನರಿಗೆ ಟಿಕೆಟ್ ಕೊಡುವ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಹೇಳಿದ್ದಾರೆ.