ಬಿಎಂಟಿಸಿಯನ್ನು ಖಾಸಗೀಕರಣ ಮಾವುದಿಲ್ಲ-ಸಚಿವ ಆರ್.ಅಶೋಕ್

ಬೆಂಗಳೂರು,ನ.7- ಬಿಎಂಟಿಸಿಯನ್ನು  ಖಾಸಗೀಕರಣ ಮಾವುದಿಲ್ಲ ಎಂದಿರುವ ಸಚಿವ ಆರ್.ಅಶೋಕ್ ಜನಸ್ನೇಹಿ ವಾಹನಗಳನ್ನ ನಾವು ಕೊಡುಗೆ ನೀಡುವ ಮೂಲಕ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಸೇವೆ ನೀಡಬೇಕಿದೆ ಎಂದರು.

ಬಿಎಂಟಿಸಿ ಅಧ್ಯಕ್ಷರಾಗಿ ನಂದೀಶ ರೆಡ್ಡಿ ಅಧಿಕಾರ ಸ್ವೀಕಾರ. ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು  ಸೋಲಾರ್ ಹಾಗೂ ಬ್ಯಾಟರಿ ಚಾಲಿತ ಬಸ್ ಖರೀದಿಸುವಂತೆ ಪ್ರಧಾನಿ ಸೂಚಿಸಿದ್ದಾರೆ. ಇದರ ಖರೀದಿಗೆ  ಖರ್ಚು ಜಾಸ್ತಿ ಬರಲಿದೆ. ಹೀಗಾಗಿ ಖಾಸಗಿ ಬಸï ತೆಗೆದುಕೊಂಡು, ಬಿಎಂಟಿಸಿ ಜೊತೆ ಸೇರಿಸಲಾಗುವುದು ಎಂದು ತಿಳಿಸಿದರು.

ಬಸ್‍ಗಳನ್ನು  ಲೀಸ್‍ಗೆ  ಪಡೆದು ಚಲಾಯಿಸಲಾಗುವುದು. ಬಿಎಂಟಿಸಿ  ನೀಡುವ ಸ್ಟೂಡೆಂಟ ಬಸ್ ಪಾಸ್‍ಗೆ  ಸರ್ಕಾರ ರಿಯಾಯಿತಿ ಹಣ ಭರಿಸುತ್ತಿಲ್ಲ. ಇದು ನಷ್ಟಕ್ಕೆ ಕಾರಣವಾಗ್ತಿದೆ ಎಂದು ಮಾಹಿತಿ ನೀಡಿದರು.

ನಮಗೆ ಲಾಭ ಬರೋದಕ್ಕಿಂತ, ನಷ್ಟ ಆಗಬಾರದು ಅನ್ನೋದೆ ನಮ್ಮ ಗುರಿ ನಂದೀಶï ರೆಡ್ಡಿ ನೇತೃತ್ವದಲ್ಲಿ ಮುಂದೆ ಅಧಿಕಾರ ನಡೆಯಲಿದೆ ಎಂದರು.

ಐಟಿ ಬಿಟಿ ಸೆಕ್ಟರ ನವರು ಒಬ್ಬರೇ ಒಂದೊಂದು ಕಾರಿನಲ್ಲಿ ಓಡಾಡ್ತಾರೆ.ಅದನ್ನ ತಡೆಯಲು ಎಸಿ ಬಸ್‍ಗಳನ್ನ ಬಿಡಲಾಯಿತು.ಇದರಿಂದ ಟ್ರಾಫಿಕï ದಟ್ಟಣೆ ಮತ್ತು ಮಾಲಿನ್ಯ ಕಡಿಮೆಯಾಗಲಿದೆ.

ಮಾಸ ಟ್ರಾನ್ಸ್‍ಪೋರ್ಟ್‍ನಿಂದ ಸಮಸ್ಯೆ ಬಗೆಹರಿಯಲಿದೆ. ಒಂದು ಬಸ್ಸಿನಲ್ಲಿ 700 ಜನರು ಪ್ರಯಾಣಿಸಬಹುದಾಗಿದೆ  ಎಂದು ಹೇಳಿದರು.

ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಬಸ್ ದಿನ ಆಚರಿಸಲಾಗ್ತಿತ್ತು.ಅದನ್ನ ಮತ್ತೆ ಮುಂದುವರೆಸುವುದಾಗಿ ನಂದೀಶï ರೆಡ್ಡಿ ಹೇಳಿದರು.

ಬೆಂಗಳೂರಿನಲ್ಲಿ  ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಇದರಿಂದ ಪರಿಸರ ಮಾಲೀನ್ಯ  ಕೂಡ ಹೆಚ್ಚುತ್ತಿದೆ. ಜನಸ್ನೇಹಿ ವಾಹನ ಮತ್ತು ಬಸ ಬೇ ಯೋಜನೆ ಜಾರಿಗೆ ತರುವ ಜತೆಗೆ ಎಲೆಕ್ಟ್ರಿಕ್ ಬಸ ತರುವ ಬಗ್ಗೆ ಈಗಾಗಲೇ ಸಿಎಂ ಚರ್ಚೆ ಮಾಡಿದ್ದಾರೆ .ಬಿಎಂಟಿಸಿ ನಷ್ಟದ ಬಗ್ಗೆ ತಿಳಿದಿಲ್ಲ, ಮುಂದೆ ತಿಳಿದುಕೊಳ್ಳುತ್ತೇನೆ ಎಂದು ವಿವರಿಸಿದರು.

ಸಂಸದ ತೇಜಸ್ವಿ ಸೂರ್ಯ, ಶಾಸಕ ಸತೀಶ ರೆಡ್ಡಿ.ಮತ್ತಿತರಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ