ಬೆಂಗಳೂರು: ಸಿಎಂ ಯಡಿಯೂರಪ್ಪಾಗೆ ಮೊಬೈಲ್ ಭೂತ ಕಾಡುತ್ತಿದೆಯಾ ? ಇಂಥದೊಂದು ಪ್ರಶ್ನೆ ಈಗ ಕಾಡ್ತಿದೆ.
ಮೊನ್ನೆ ಕಾರ್ಯಕರ್ತತೊಂದಿಗೆ ಮಾತನಾಡುವ ಆಡಿಯೋ ಲೀಕ್ ಆಗಿತ್ತು. ಈ ಹಿನ್ನೆಲೆಯಲ್ಲಿ ತಮ್ಮನ್ನ ಬಂದು ಭೇಟಿಯಾಗಲು ಬರುವವರಿಗೆ ಮೊಬೈಲ್ ತರದಂತೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದಾರೆ. ಡಾಲರ್ಸ್ ಕಾಲೊನಿಯ ತಮ್ಮ ಮೆನೆಯಲ್ಲಿ ಬೋರ್ಡ್ ವೊಂದನ್ನ ಹಾಕಿದ್ದು ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ. ಸಿಎಂ ಅವರನ್ನಭೇಟಿ ಮಾಡುವವರು ಮೊಬೈಲನ್ನ ಪೊಲಿಸರ ಬಳಿ ಕೊಟ್ಟು ಹೋಗಬೇಕಿದೆ.