ತಟಸ್ಥ ಸ್ಥಳದಲ್ಲಿ ಡೇವಿಸ್ ಕಪ್ ಟೂರ್ನಿ: ಐಟಿಎಫ್

ನವದೆಹಲಿ: ಪಾಕಿಸ್ತಾನ ವಿರುದ್ಧ ನಡೆಯಬೇಕಿದ್ದ ಡೇವಿಸ್ ಕಪ್ ಟೂರ್ನಿಯನ್ನ ತಟಸ್ಥ ಸ್ಥಳದಲ್ಲಿ ನಡೆಸಲು ಅಂತಾರಾಷ್ಟ್ರೀಯ ಟೆನ್ನಿಸ್ ಫೆಡರೇಶನ್ (ಐಟಿಎಫ್ )ಹೇಳಿದೆ.

 

 

 

 

 

 

 

 

 

 

 

 

ಈ ತಿಂಗಳಾಂತ್ಯದಲ್ಲಿ ಭಾರತ ಟೆನ್ನಿಸ್ ತಂಡ ಪಾಕ್  ವಿರುದ್ಧ ಡೇವಿಸ್ ಕಪ್  ಟೂರ್ನಿ ಆಡಲು ಇಸ್ಲಾಮಾಬಾದ್್ಗೆ ಆಡಲು ಹೋಗಬೇಕಿತ್ತು. ಆದರೆ ಟೂರ್ನಿಗೂ ಮುನ್ನ ಭಾರತ ತಂಡ ಪಾಕ್ ಗೆ ಹೋಗಿ ಆಡುವ ಬಗ್ಗೆ ಭಾರತ ಟೆನ್ನಿಸ್ ಫಡರೇಶನ್ ಎಐಟಿಎ ಹಿಂದೇಟು ಹಾಕಿತ್ತು.

ಅಂತಾರಾಷ್ಟ್ರೀಯ  ಟೆನ್ನಿಸ್  ಫೆಡರೇಶನ್ ಭದ್ರತಾ ಸಲಹಾ ಮಂಡಳಿ ನೀಡಿದ ಸಲಹೆಯನ್ನ  ಸ್ವೀಕರಿಸಿದ್ದು ಭಾರತ ಮತ್ತು ಪಾಕಿಸ್ತಾನ ನಡುವಿನ ಡೇವಿಸ್ ಕಪ್ ಟೂರ್ನಿಯನ್ನ ತಟಸ್ಥ ಸ್ಥಳದಲ್ಲಿ ನಡೆಸಲು ತೀರ್ಮಾನಿಸಿರುವುದಾಗಿ ಹೇಳಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ