ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಸಿಲುಕಿ ಬಂಧನಕೊಳ್ಳಕ್ಕಾಗಿ ನಂತರ ಬಿಡುಗಡೆಯಾಗಿರುವ ಡಿಕ ಶಿವಕುಮಾರ್ ಇಂದು ರವತಿಗೆ ವಾಪಸ್ ಮರಳಲಿದ್ದಾರೆ.
11.55 ಮೂಲಕ ಸ್ಪೈಸ್ ಜೆಟ್ ಮೂಲಕ ಬೆಂಗಳೂರಿಗೆ ಡಿಕೆಶಿ ಬರಲಿದ್ದಾರೆ. 2.30ರ ವೇಳೆಗೆ ಡಿಕೆಶಿ ಬೆಂಗಳೂರು ತಲುಪಲಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಭಾರೀ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಅಹಿಕತ ಘಟನೆ ನಡೆಯದಂತೆ 3 ಎಸಿಪಿ 10 ಇನ್ಸ್ಪೆಕ್ಸಟರ್ 20 ಪಿಎಸ್ಐ 150 ಸಿಬ್ಬಂದಿಗಳನ್ ನಿಯೋಜಿಸಲಾಗಿದೆ. ಡಿಕೆಶಿ ಇಂದು ಸಂಜೆ 5.30ಕ್ಕೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲಿದ್ದಾರೆ.
ಡಿಕೆಶಿ ಸ್ವಾಗತಕ್ಕೆ ಕೈ ಕಾರ್ಯಕರ್ತರು, ಬೆಂಬಲಿಗರು ಸಜ್ಜಾಗಿದ್ದಾರೆ.ದೇವನಹಳ್ಳಿ ಟೋಲ್ ಗೇಟ್ ನಿಂದ 9 ಗಂಟೆಗೆ ಬೈಕ್ ರ್ಯಾಲಿ ನಡೆಯಲಿದೆ. ರಾಮನಗರದಿಂದ ಅಭಿಮಾನಿಗಳು ಬೆಂಗಳೂರಿಗೆ ತೆರೆಳಲಿದ್ದಾರೆ. ಖಾಸಗಿಬಸ್ ಮಿನಿ ಬಸ್ ಮತ್ತು ಟಾಟಾ ಸುಮಾ ಹಾಗೂ ಸ್ವಂತ ವಾಹನಗಳಲ್ಲೂ ತೆರೆಳಲಿದ್ದಾರೆ. ಒಟ್ಟು 800 ವಾಹನಗಳು ಸಿದ್ದವಾಗಿವೆ.
ಡಿಕೆಶಿ ಸ್ವಾಗತಕ್ಕೆ ಕುಟುಂಬ ವರ್ಗ ಕೂಡ ಸಜ್ಜಾಗಿದೆ. ಮೊನ್ನೆಯಷ್ಟೆ ಡಿಕೆಶಿ ಕುಟುಂಬ ಹಾಸನಂಬೆ ದೇವಿಯ ದರ್ಶನ ಪಡೆದು ಬಂದಿತ್ತು.
ಡಿಕೆಶಿ ಸ್ವಾಗತದಿಂದ ಸಿದ್ದರಾಮಯ್ಯ ದೂರ
ಕನಕಪುರದ ಬಂಡೆ ಡಿಕ ಶಿವಕುಮಾರ್ ಬಂಧನಕ್ಕೆ ಇಡೀ ಕೈ ಪಾಳೆಯ ಸಜ್ಜಾಗಿದೆ. ಆದರೆ ಮಾಜಿ ಸಿಎಂ ಸಿದ್ದಾಋಮಯ್ಯ ಮಾತ್ರ ಈ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ. ಸಿದ್ದಾರಮಯ್ಯ ಉತ್ತರ ಕರ್ನಾಟಕದಲ್ಲಿ ನೆರೆ ಸಂತ್ರಸ್ತರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.