ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ಸಂಭವಿಸಿದ ಸ್ಫೋಟ ಸಂಬಂಧ-ಶಂಕಿತ ವ್ಯಕ್ತಿಯೊಬ್ಬ ಪೊಲೀಸರ ವಶಕ್ಕೆ

ಬೆಂಗಳೂರು, ಅ.22- ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ಸಂಭವಿಸಿದ ಸ್ಫೋಟಕ್ಕೆ ಸಂಬಂಧಪಟ್ಟಂತೆ ಶಂಕಿತ ವ್ಯಕ್ತಿಯೊಬ್ಬನನ್ನು  ವಶಕ್ಕೆ ಪಡೆದು ಪೆÇಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಸ್ಫೋಟದ ಬಗ್ಗೆ ಹಳೇ ಹುಬ್ಬಳ್ಳಿ ಠಾಣೆ ಪೆÇಲೀಸರು ತನಿಖೆ ನಡೆಸುತ್ತಿದ್ದು,  ರೈಲ್ವೆ ಕಾರ್ಯಾಗಾರದ ನೌಕರ ,ಅರವಿಂದ ನಗರದ  ನಿವಾಸಿಯೊಬ್ಬನನ್ನು  ವಶಕ್ಕೆ  ಪಡೆದುಕೊಂಡಿದ್ದಾರೆ.

ಈತ ಸೆಮಿ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೆÇಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಕರ್ನಾಟಕಕ್ಕೆ ಬಾಂಗ್ಲಾ ಹಾಗೂ ಪಾಕಿಸ್ತಾನದಿಂದ ಉಗ್ರರು ಅಕ್ರಮವಾಗಿ ನುಸುಳಿದ್ದಾರೆ ಎಂದು ಖುದ್ದು ಗೃಹ ಸಚಿವರೇ ಹೇಳಿಕೆ ನೀಡಿದ್ದರು.ಅದರ ಬೆನ್ನಲ್ಲೇ ಈ ಸ್ಫೋಟ ನಡೆದಿರುವುದು ಆತಂಕ ಸೃಷ್ಟಿಸಿದೆ.

ದೀಪಾವಳಿಗೆ ಕೆಲವೇ ದಿನಗಳು ಬಾಕಿ ಇದ್ದು, ಉತ್ತರ ಕರ್ನಾಟಕ ಭಾಗದ ಜನರಿಗೆ ಇದು ಪ್ರಮುಖ ಹಬ್ಬ. ಬಹುತೇಕ ಮಂದಿ ರೈಲುಗಳಲ್ಲಿ ತಮ್ಮ ಊರಿಗೆ ಹೋಗುವುದು ಸಾಮಾನ್ಯ. ಈ ಬಾಂಬ್ ಸ್ಫೋಟ ಹೊಸ ಆತಂಕಗಳನ್ನು  ಸೃಷ್ಟಿ ಸಿದೆ.

ವಿಜಯವಾಡದಿಂದ ಹುಬ್ಬಳ್ಳಿಗೆ ಆಗಮಿಸಿದ್ದ ಅಮರಾವತಿ ಎಕ್ಸ್‍ಪ್ರೆಸ್ ರೈಲಿನಲ್ಲಿ ಕೆಂಪುಬಣ್ಣದ ರಟ್ಟಿನಿಂದ ಸುತ್ತಿದ್ದ ಬಕೆಟ್‍ವೊಂದು ಪತ್ತೆಯಾಗಿತ್ತು. ಅದರ ಮೇಲೆ  ಶಿವಸೇನೆ ಶಾಸಕರೊಬ್ಬರ ಹೆಸರು ನಮೂದಿಸಲಾಗಿತ್ತು. ವಾರಸುದಾರರಿಲ್ಲದ  ಅನುಮಾನಾಸ್ಪದ ಬಕೆಟ್‍ನ್ನು ರೈಲ್ವೆ ಪೆÇಲೀಸರು ಸ್ಟೇಷನ್ ಮಾಸ್ಟರ್ ಕಚೇರಿಗೆ ತಂದಿದ್ದರು.

ನಂತರ ಅಲ್ಲೇ ಇದ್ದ ಚಹಾ ವ್ಯಾಪಾರಿ ಹುಸೇನ್ ಸಾಬ್ (22)ನಿಂದ ಬಕೆಟ್ ತೆಗೆಸಿ  ಪರಿಶೀಲಿಸಿದರು. ಆ  ವೇಳೆ  ಬಕೆಟ್‍ನಲ್ಲಿ ಎರಡು ನಿಂಬೆಹಣ್ಣಿನ ಗಾತ್ರದ ಉಂಡೆಗಳು ಪತ್ತೆಯಾಗಿದ್ದು, ಹುಸೇನ್ ಅವುಗಳನ್ನು ಕುತೂಹಲದಿಂದ ತಟ್ಟಿದಾಗ ಭಾರೀ ಸ್ಫೋಟ ಸಂಭವಿಸಿ ಆತನ ಅಂಗೈ ಸಂಪೂರ್ಣ ಛಿದ್ರಗೊಂಡಿತ್ತು.

ಘಟನೆಗೆ ಸಂಬಂಧಿಸಿದಂತೆ ಸ್ಫೋಟಕ ಕಾಯ್ದೆ  ಸೆಕ್ಷನ್ 9ಬಿ, ಸ್ಫೋಟಕ ವಸ್ತುಗಳ ಕಾಯ್ದೆ ಸೆಕ್ಷನ್ 4 ಮತ್ತು 5 ಹಾಗೂ ಐಪಿಸಿ ಸೆಕ್ಷನ್ 307 ಮತ್ತು 326ರಡಿ ಪ್ರಕರಣ ದಾಖಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ