ಈ ದೀಪಾವಳಿಗೆ ನಾರಿ ಶಕ್ತಿಯನ್ನು ಸಂಭ್ರಮಿಸೋಣ, ಭಾರತ್ ಕಿ ಲಕ್ಷ್ಮಿ ಅಭಿಯಾನ ಕೈಗೊಳ್ಳಿ: ಮನ್ ಕಿ ಬಾತ್ ನಲ್ಲಿ ಮೋದಿ ಕರೆ

ನವದೆಹಲಿ: ಅಮೆರಿಕಾ ಪ್ರವಾಸ ಮುಗಿಸಿ ದೆಹಲಿಗೆ ವಾಪಸ್ಸಾದ ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶದ ಜನರನ್ನುದ್ದೇಶಿಸಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

ಇಂದಿನ ಮೋದಿ ಭಾಷಾಣದ ಸಾರಾಂಶ ಹೀಗಿದೆ: 

ಮೊಟ್ಟಮೊದಲಿಗೆ ಗಾನ ಕೋಗಿಲೆ ಲತಾ ಮಂಗೇಶ್ಕರ್ ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ನರೇಂದ್ರ ಮೋದಿ. ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿದ ಲತಾ ಅವರ ಬಗ್ಗೆ ಮಾತನಾಡಿದ ಮೋದಿ, ಲತಾ ಮಂಗೇಶ್ಕರ್ ಅವರ ಗಾನವನ್ನು ಇಷ್ಟಪಡದವರು ಅವರನ್ನು ಮೆಚ್ಚದವರು ಬಹುಶಃ ಯಾರೂ ಇರಲಿಕ್ಕಿಲ್ಲ, ನಮಗೆಲ್ಲರಿಗೂ ಅವರು ಹಿರಿಯರು, ನಾವೆಲ್ಲರೂ ನೆಚ್ಚಿನಿಂದ ಅವರನ್ನು ದೀದೀ ಎಂದು ಕರೆಯುತ್ತೇವೆ, 

ನಿಮಗೆ ಹುಟ್ಟುಹಬ್ಬದ ಶುಭಾಶಯಗಳು, ಅಭಿನಂದನೆಗಳು, ನಿಮಗೆ ಆಯುರಾರೋಗ್ಯ ದೇವರು ಕರುಣಿಸಲಿ, ಅಮೆರಿಕಾಕ್ಕೆ ಹೋಗುವ ಮೊದಲು ನಿಮಗೆ ಕರೆ ಮಾಡಿ ಶುಭಾಶಯ ತಿಳಿಸಿದ್ದೆ.

ಅದಕ್ಕೆ ಕೃತಜ್ಞತೆ ಸಲ್ಲಿಸಿದ್ದ ಲತಾಜೀ, ನೀವು ಪ್ರಧಾನಿಯಾದ ಬಳಿಕ ದೇಶದ ಚಿತ್ರಣ ಬದಲಾಗಿದೆ. ಅದು ನನಗೆ ಬಹಳ ಸಂತೋಷವನ್ನುಂಟುಮಾಡಿದೆ ಎಂದಿದ್ದರು.

ಇಂದಿನಿಂದ ನವರಾತ್ರಿ ಹಬ್ಬ ಆರಂಭ, ಹಬ್ಬದ ವಾತಾವರಣ ಹೊಸ ಹುರುಪು ಮತ್ತು ಉತ್ಸಾಹಗಳಿಂದ ಕಳೆಕಟ್ಟಿದೆ, ಈ ಸಮಯದಲ್ಲಿ ನಾವು ಸಂತೋಷವನ್ನು ಸಂಭ್ರಮವನ್ನು ಪಸರಿಸಬೇಕಿದೆ.

ನವರಾತ್ರಿ ಕಳೆದು ಕೆಲ ದಿನಗಳಲ್ಲಿ ದೀಪಾವಳಿ ಬರುತ್ತದೆ. ಈ ದೀಪಾವಳಿಯನ್ನು ನಾವು ಭಾರತದ ಲಕ್ಷ್ಮಿ ಎಂದು ಆಚರಿಸೋಣ. ನಾರಿಯರ ಕೌಶಲ್ಯ ಮತ್ತು ಶಕ್ತಿಯನ್ನು ಕೊಂಡಾಡೋಣ.

ಅದಷ್ಟ ಮತ್ತು ಸಮೃದ್ಧಿ ಹೆಸರಿನಲ್ಲಿ ಲಕ್ಷ್ಮಿ ದೇವಿ ಪ್ರತಿಯೊಬ್ಬರ ಮನೆಗೆ ಕಾಲಿಡುತ್ತಾಳೆ, ಲಕ್ಷ್ಮಿ ದೇವಿಯನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸುತ್ತೇವೆ. ಮಹಿಳೆಯನ್ನು ಮನೆಯಲ್ಲಿ ಹುಟ್ಟಿದ ಮಗಳನ್ನು ಲಕ್ಷ್ಮಿ ಎಂದು ನಮ್ಮ ಸಂಸ್ಕೃತಿಯಲ್ಲಿ ಗೌರವಿಸುತ್ತೇವೆ.

ಗ್ರಾಮಗಳಲ್ಲಿ, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿರುವ ಲಕ್ಷ್ಮಿಯರಿಗಾಗಿ ನಾವು ಕಾರ್ಯಕ್ರಮ ಆಯೋಜಿಸೋಣವೇ?

ಮಹಿಳೆಯರ, ಪುಟ್ಟ ಲಕ್ಷ್ಮಿಯರ ಸಾಧನೆಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳೋಣ, ಸೆಲ್ಫಿ ವಿತ್ ಡಾಟರ್ ಎಂಬ ಹ್ಯಾಶ್ ಟಾಗ್ ನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಮಾಡಿದಂತೆ ಭಾರತ್ ಕಿ ಲಕ್ಷ್ಮಿ ಎಂದು ಹ್ಯಾಶ್ ಟ್ಯಾಗ್ ಬರೆದು ಅಭಿಯಾನ ಮಾಡಿರಿ.

ಈ ಹಬ್ಬದ ಸಮಯದಲ್ಲಿ ನಾವು ಡೆಲಿವರಿ ಇನ್ ಮತ್ತು ಡೆಲಿವರಿ ಔಟ್ ಎಂಬ ಪರಿಕಲ್ಪನೆಯನ್ನು ಪಾಲಿಸೋಣ, ಒಂದೆಡೆ ಹಬ್ಬಕ್ಕೆಂದು ಸ್ವೀಟ್ ಗಳು, ಗಿಫ್ಟ್ ಗಳು ಮನೆಗೆ ಬರುತ್ತವೆ, ಇದೇ ಸಮಯದಲ್ಲಿ ನಮಗೆ ಬೇಡವಾದ ಮನೆಯಲ್ಲಿ ಹೆಚ್ಚಿಗೆ ಇರುವ ವಸ್ತುಗಳನ್ನು ಅಗತ್ಯ ಇರುವವರಿಗೆ ನೀಡೋಣ. 

ಅರುಣಾಚಲ ಪ್ರದೇಶದ ಡೇನಿಲ್ ಮೆಡ್ವೆಡ್ ಎಂಬ ವಿದ್ಯಾರ್ಥಿಯೊಬ್ಬ ನನಗೆ ಮನವಿ ಮಾಡಿ, ಈಗಾಗಲೇ ಶೈಕ್ಷಣಿಕ ವರ್ಷದ ಅರ್ಧ ವರ್ಷ ಮುಗಿದಿದೆ, ಮುಂದಿನ ಅರ್ಧ ವರ್ಷಕ್ಕೆ ಪರೀಕ್ಷೆಗೆ ಸಿದ್ದವಾಗುವ ಬಗ್ಗೆ ಪೋಷಕರಿಗೆ ಮತ್ತು ಶಿಕ್ಷಕರಿಗೆ ಸಂಬಂಧಿಸಿ ಹೆಚ್ಚು ವಿಷಯಗಳನ್ನು ಬರೆಯಬಹುದೇ ಎಂದು ಕೇಳಿದ್ದಾನೆ. ಈತನ ಮಾತುಗಳು ನನಗೆ ಬಹಳ ಹಿಡಿಸಿತು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ