ತುಮಕೂರು, ಆ.26-ಪ್ರಜಾಪ್ರಭುತ್ವದ ನಾಲ್ಕನೆ ಅಂಗದಲ್ಲಿ ಪತ್ರಿಕೆಗಳ ಪಾತ್ರ ಪ್ರಮುಖವಾಗಿದೆ.ನೊಂದವರ ದನಿಯಾಗಿ ಸಮಾಜದ ಕಣ್ಣಾಗಿ ಪತ್ರಿಕೆಗಳು ಕೆಲಸ ಮಾಡುವಂತೆ ಸಚಿವ ಮಾಧುಸ್ವಾಮಿ ಅವರು ಸಲಹೆ ನೀಡಿದರು.
ನಗರದ ಪತ್ರಿಕಾ ಭವನದ ಆವರಣದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಪತ್ರಕರ್ತರ ಸಾಂಸ್ಕøತಿಕ ಹಬ್ಬ ಹಾಗೂ ದತ್ತಿ ಪ್ರಶಸ್ತಿಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹಿರಿಯ ಪತ್ರಕರ್ತರಾಗಿದ್ದ ದಿ.ಗುಂಡೂರಾವ್ ಅವರ ಆದರ್ಶ ಪತ್ರಿಕಾ ಕ್ಷೇತ್ರದ ಮೌಲ್ಯಗಳನ್ನು ಪ್ರತಿಯೊಬ್ಬರೂ ಎತ್ತಿ ಹಿಡಿಯಬೇಕು ಪತ್ರಿಕಾ ಮೌಲ್ಯದ ಗುಣಗಳನ್ನು ಎತ್ತಿ ಹಿಡಿಯಬೇಕು ಹಾಗೂ ಪತ್ರಕರ್ತರು ತನಿಖಾ ವಿಭಾಗಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಈ ಸಂದರ್ಭದಲ್ಲಿ ಅವರು ಕರೆ ನೀಡಿದರು .
ಸಾಮಾಜಿಕ ಜನರ ಕಳಕಳಿಯಾಗಿ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಅರಿತು ಕೆಲಸ ಮಾಡಬೇಕಾಗಿರುವ ಪತ್ರಿಕೆಗಳು ಸಮಾಜದಲ್ಲಿ ಶೋಷಿತರ ಪರವಾಗಿ ಧ್ವನಿ ಎತ್ತಬೇಕು ಯಾವುದೇ ರಾಜಕಾರಣಿಗಳು ತಪ್ಪು ಮಾಡಿದರೆ ಅದನ್ನು ಎಚ್ಚರಿಸುವ ಕೆಲಸವನ್ನು ಮಾಧ್ಯಮಗಳು ಮಾಡಿದರೆ ಅದನ್ನು ನಾವು ತಿದ್ದಿಕೊಳ್ಳುವುದಕ್ಕೆ ಸಹಕಾರಿಯಾಗಲಿದೆ . ಸಮಾಜವನ್ನು ತಿದ್ದುವ ಶಕ್ತಿ ಪತ್ರಿಕೆಗಿದೆ .ಮಹಾತ್ಮ ಗಾಂಧೀಜಿಯವರು ಪತ್ರಿಕೆಗಳ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದರು .ನಾವು ಎಡವಿದರೆ ನಮ್ಮನ್ನು ತಿದ್ದುವುದು ಪತ್ರಿಕೆಗಳು ಹಾಗಾಗಿ ಪ್ರಜಾಪ್ರಭುತ್ವದ ನಾಲ್ಕನೇಯ ಅಂಗ ಪತ್ರಿಕಾ ರಂಗ ಎಂದು ಮಹಾತ್ಮ ಗಾಂಧೀಜಿಯವರು ಪ್ರಮುಖವಾಗಿ ನಂಬಿದ್ದರು ಅದೇ ರೀತಿ ನಾನೂ ಕೂಡ ಪತ್ರಿಕಾರಂಗಕ್ಕೆ ಹೆಚ್ಚು ಮಹತ್ವವನ್ನು ಕೊಡುತ್ತೇನೆ ಎಂದರು.
ಸಂಸದ ಜಿ.ಎಸ್.ಬಸವರಾಜ್ ಅವರು ಮಾತನಾಡಿ, ದೇಶದಲ್ಲಿ ನೂರಾರು ಸಾವಿರಾರು ಸಮಸ್ಯೆಗಳಿವೆ ಆ ಸಮಸ್ಯೆಗಳತ್ತ ಪತ್ರಿಕೆಗಳು ಬೆಳಕು ಚೆಲ್ಲಿ ರಾಜಕಾರಣಿಗಳು ಸರಕಾರಗಳ ಗಮನ ಸೆಳೆದು ವಿರೋಧ ಪಕ್ಷದವರಂತೆ ಕೆಲಸ ನಿರ್ವಹಿಸುತ್ತಾರೆ ಆಡಳಿತ ಮಾಡುವವರು ಯಾರೇ ಆಗಲಿ ಅಥವಾ ತಪ್ಪು ಮಾಡುವ ಯಾವುದೇ ರಾಜಕಾರಣಿಗಳಾಗಲೀ ತಮ್ಮ ತಪ್ಪನ್ನು ತಿದ್ದಿಕೊಳ್ಳುವುದಕ್ಕೆ ಪತ್ರಿಕೆಗಳ ಮೌಲ್ಯ ಪರವಾಗಿರುವ ಅಪಾರವಾಗಿದೆ ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತರ ಸಾಂಸ್ಕøತಿಕ ಹಬ್ಬ ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿದೆ. ಜಿಲ್ಲೆಯ ಪತ್ರಕರ್ತರೆಲ್ಲರೂ ಒಗ್ಗಟ್ಟಾಗಿರಬೇಕು .ಇಡೀ ರಾಜ್ಯಕ್ಕೆ ತುಮಕೂರು ಜಿಲ್ಲಾ ಪತ್ರಕರ್ತರ ಸಂಘ ಮಾದರಿಯಾಗಬೇಕೆಂದು ಈ ಸಂದರ್ಭದಲ್ಲಿ ಕರೆ ನೀಡಿದರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಭೃಂಗೇಶ್ ಅವರು ಈ ಸಂದರ್ಭದಲ್ಲಿ ಮಾತನಾಡಿ ಪತ್ರಕರ್ತರ ಕೆಲಸ ಜವಾಬ್ದಾರಿಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು .
ಇದೇ ಸಂದರ್ಭದಲ್ಲಿ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಮಾತನಾಡಿ ಜಿಲ್ಲಾ ಪತ್ರಕರ್ತರ ಸಮಸ್ಯೆಗಳು ಸೇರಿದಂತೆ ರಾಜ್ಯ ಮಟ್ಟದಲ್ಲಿರುವ ಹಲವಾರು ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು .
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಾದ ಡಾ ಶೋಭಾರಾಣಿ, ಮಹಾನಗರ ಪಾಲಿಕೆಯ ಮೇಯರ್ ಲತಾ ರವೀಶ್ , ವಾರ್ತಾ ಇಲಾಖೆಯ ಮಂಜುನಾಥ್ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಚೀನಿ ಪುರುಷೋತ್ತಮ, ಪ್ರಧಾನ ಕಾರ್ಯದರ್ಶಿ ರಂಗರಾಜ್ ಸೇರಿದಂತೆ ಸಂಘದ ಪದಾಧಿಕಾರಿಗಳು ನಿರ್ದೇಶಕರುಗಳು ಸದಸ್ಯರುಗಳು ಭಾಗವಹಿಸಿದ್ದರು ಜಿಲ್ಲೆಯಾದ್ಯಂತ ಪತ್ರಕರ್ತರ ಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ದತ್ತಿ ಪ್ರಶಸ್ತಿಗಳಿಗೆ ಆಯ್ಕೆಯಾದ ಪತ್ರಕರ್ತರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.