ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿರುವ ‘ಮೇಕ್ ಇನ್ ಇಂಡಿಯಾ’ಗೆ ಇನ್ನೊಂದು ಗರಿ ಮೂಡಿದೆ. ಭಾರತೀಯ ರೈಲ್ವೇಯು ಗಂಟೆಗೆ 180 ಕಿಲೋ ಮೀಟರ್ ದೂರವನ್ನು ಕ್ರಮಿಸಬಲ್ಲ ಸಾಮರ್ಥ್ಯವಿರುವ ಎಂಜಿನ್ ಒಂದನ್ನು ಅಭಿವೃದ್ಧಿಪಡಿಸಿದೆ.
ಪಶ್ವಿಮ ಬಂಗಾಲದಲ್ಲಿರುವ ಲೋಕೊಮೋಟೀವ್ ನಲ್ಲಿ ಇದನ್ನು ತಯಾರಿಸಲಾಗಿದೆ. ಈ ವಿಷಯವನ್ನು ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.
ಸಚಿವರು ತಮ್ಮ ಟ್ವೀಟ್ ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಹೊಸದಾಗಿ ತಯಾರಿಸಲಾಗಿರುವ ಈ ದೇಶೀ ಎಂಜಿನ್ ಗಂಟೆಗೆ 179.8 ಕಿಲೋಮೀಟರ್ ದೂರವನ್ನು ಕ್ರಮಿಸಿರುವುದು ದಾಖಲುಗೊಂಡಿದೆ.