ಕಾಶ್ಮೀರ ವಿಷಯದಲ್ಲಿ ವಿಶ್ವ ಸಮುದಾಯದ ಬೆಂಬಲವಿಲ್ಲದೆ ಸೋಲೊಪ್ಪಿಕೊಂಡ ಪಾಕ್

ಇಸ್ಲಾಮಾಬಾದ್ಜಮ್ಮು ಮತ್ತು ಕಾಶ್ಮೀರದ ಆರ್ಟಿಕಲ್ 370 ರದ್ದತಿ ವಿಷಯದಲ್ಲಿ ವಿನಾಕಾರಣ ಭಾರತದ ವಿರುದ್ಧ ವಿಶ್ವಸಂಸ್ಥೆಗೆ ದೂರು ನೀಡಿರುವ ಪಾಕಿಸ್ತಾನಕ್ಕೆ ಪ್ರಪಂಚದ ಯಾವುದೇ ಮೂಲೆಯಿಂದಲೂ ಬೆಂಬಲ ಸಿಗುತ್ತಿಲ್ಲ.

ಸಂಬಂಧಿಸಿದಂತೆ ಪಾಕ್ ಪ್ರಚಾರ ಕ್ರಮ ವಿಫಲವಾದ ಬಗ್ಗೆ ಅಲ್ಲಿಯ ವಿದೇಶಾಂಗ ಸಚಿವರೇ ಬಾಯಿಬಿಟ್ಟಿದ್ದಾರೆ.

ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಮುಜಾಫರಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾ ಮಹ್ಮೂದ್ ಖುರೇಷಿ, ಕಾಶ್ಮೀರದ ವಿಚಾರವಾಗಿ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿಯೂ ಸಹ ನಮಗೆ ಬೆಂಬಲ ಸಿಗುವುದು ಕಷ್ಟ ಎನ್ನುವ ಮೂಲಕ ಪರೋಕ್ಷವಾಗಿ ಸೋಲೊಪ್ಪಿಕೊಂಡಿದ್ದಾರೆ.

ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್‌ಗೆ ಮತ್ತೊಮ್ಮೆ ಮುಖಭಂಗವಾಗಿದೆ.

ಕಾಶ್ಮೀರದ ವಿಚಾರದಲ್ಲಿ ವಿಶ್ವ ಸಮುದಾಯದಿಂದ ಯಾವುದೇ ಬೆಂಬಲ ಸಿಗದಿರುವ ಕಾರಣ ಸಿಡಿಮಿಡಿಗೊಂಡು ಮಾತನಾಡಿರುವ ಖುರೇಷಿ, ‘ನಾವು ಮೂರ್ಖರ ಸ್ವರ್ಗದಲ್ಲಿ ಇರಬಾರದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾರು ಕೂಡ ನಮ್ಮ ಬೆಂಬಲಕ್ಕೆ ನಿಲುವುದಿಲ್ಲ ಎನ್ನುವದನ್ನು ಪಾಕಿಸ್ತಾನಿಯರು ಮತ್ತು ಕಾಶ್ಮೀರಿಗಳು ತಿಳಿದುಕೊಳ್ಳಬೇಕು. ಕೂಡಲೇ ಎಲ್ಲರೂ ಒಂದಾಗಿ ಹೋರಾಡಬೇಕು’ ಎಂದು ಕರೆ ನೀಡಿದ್ದಾರೆ.

ಪಾಕಿಸ್ತಾನದ ಹಾದಿ ಸುಗಮವಲ್ಲ ಎಂದು ವಿವರಿಸಿದ ಖುರೇಶಿ, ಭಾವನೆಯನ್ನು ಹೊರಹಾಕುವುದು ಮತ್ತು ವಸ್ತುನಿಷ್ಠೆವಾಗಿ ಅದನ್ನು ವ್ಯಕ್ತಪಡಿಸುವುದುನಸುಲಭ. ಆದರೆ, ಸಮಸ್ಯೆಯನ್ನು ಪರಿಹರಿಸಿಕೊಳ್ಳುವತ್ತ ಮುನ್ನಡೆಯುವುದು ಕಠಿಣ ಎಂದವರು ಹೇಳಿದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ