ಬೆಂಗಳೂರು, ಆ.5- ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ವಿರೋಧ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಅತ್ಯಂತ ಸೂಕ್ಷ್ಮ ವಿಚಾರ.ದಬ್ಬಾಳಿಕೆ ಮಾಡಿ, ಎಲ್ಲಾ ಸಂಪರ್ಕಗಳನ್ನು ಸ್ಥಗಿತ ಮಾಡಿ, ನಾಯಕರನ್ನು ಗೃಹ ಬಂಧನದಲ್ಲಿಟ್ಟು, ಭಯದ ವಾತಾವರಣ ನಿರ್ಮಿಸಲಾಗಿದೆ.30 ಸಾವಿರ ಸೈನಿಕರನ್ನು ನೇಮಿಸಲಾಗಿದೆ.ಆ ಭಾಗವನ್ನು ಅತಿಕ್ರಮಣ ಮಾಡಿಕೊಂಡ ರೀತಿಯಲ್ಲಿ ವರ್ತಿಸಲಾಗಿದೆ.ಕೇಂದ್ರ ಸರ್ಕಾರ ತನ್ನೆಲ್ಲಾ ಶಕ್ತಿಯನ್ನು ಬಳಸಿಕೊಂಡು ದುಸ್ಸಾಹಸ ಮಾಡಿ ಆ ರಾಜ್ಯದ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ವಿಚಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ನೋಟು ಅಮಾನೀಕರಣ ಮತ್ತು ಜಿಎಸ್ಟಿ ತೆರಿಗೆ ಪದ್ಧತಿ ಜಾರಿ ಸಂದರ್ಭದಲ್ಲೂ ಇದೇ ರೀತಿಯ ನಡವಳಿಕೆಗಳನ್ನು ಕೇಂದ್ರ ಸರ್ಕಾರ ಅನುಸರಿಸಿತ್ತು.ಬಿಜೆಪಿ ಸರ್ಕಾರ ದೇಶದ ಜನರ ಜತೆ ಚಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದರು.
ಇಂದಿರಾ ಹೆಸರು ಬದಲಾವಣೆಗೆ ವಿರೋಧ:
ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಆರಂಭಿಸಲಾಗಿರುವ ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾವಣೆ ಮಾಡಲು ಯಡಿಯೂರಪ್ಪ ಸರ್ಕಾರ ಮುಂದಾದರೆ ಪ್ರಬಲ ವಿರೋಧ ವ್ಯಕ್ತಪಡಿಸುವುದಾಗಿ ದಿನೇಶ್ಗುಂಡೂರಾವ್ ಹೇಳಿದರು.
ಬಡವರ ಪರ ಹಲವಾರು ಯೋಜನೆಗಳನ್ನು ಕೊಟ್ಟ ಧೀಮಂತ ನಾಯಕಿ ಇಂದಿರಾಗಾಂಧಿ ಅವರ ಹೆಸರಿನಲ್ಲಿ ಕ್ಯಾಂಟೀನ್ ಆರಂಭಿಸಲಾಗಿದೆ.ಕ್ಯಾಂಟೀನ್ ಮುಂದೆ ಇಂದಿರಾಗಾಂಧಿ ಅವರ ಫೆÇೀಟೋ ಹಾಕಲಾಗಿದೆ.ಬಿಜೆಪಿ ಸರ್ಕಾರ ಬದಲಿ ಹೆಸರಿಡಲು ಮುಂದಾದರೆ ವಿರೋಧಿಸುವುದಾಗಿ ತಿಳಿಸಿದರು.