ಬೆಂಗಳೂರು, ಜು.24-ಖಾಸಗಿ ಬಸ್ಸೊಂದು ರಸ್ತೆ ದಾಟುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ಉಪ್ಪಾರಪೇಟೆ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತಪಟ್ಟ ಪಾದಚಾರಿಯನ್ನು ಜಾರ್ಖಂಡ್ ಮೂಲದ ಪ್ರಭುನಂದನ್(35) ಎಂದು ಗುರುತಿಸಲಾಗಿದೆ.
ರಾತ್ರಿ 8.45ರ ಸುಮಾರಿನಲ್ಲಿ ಟ್ಯಾಂಕ್ಬಂಡ್ ರಸ್ತೆಯ ಎಲೈಟ್ ಜಂಕ್ಷನ್ ಬಳಿ ಪ್ರಭುನಂದನ್ ರಸ್ತೆ ದಾಟುತ್ತಿದ್ದಾಗ ಅತಿ ವೇಗವಾಗಿ ಬಂದ ಖಾಸಗಿ ಬಸ್ ಇವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಪ್ರಭುನಂದನ್ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ ಚಾಲಕನನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
ಕೆ.ಎನ್.ರಾಜಣ್ಣನವರು ಆರ್ಬಿಐ ಮತ್ತು ನಬಾರ್ಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ-ಮುಖಂಡ ರೇವಣ್ಣ ಸಿದ್ದಯ್ಯ
ತುಮಕೂರು,ಜು.23: ಆರïಬಿಐ ಹಾಗೂ ನಬಾರ್ಡï ನಿಯಮಗಳನ್ನು ಗಾಳಿಗೆ ತೂರಿರುವ ಮಾಜಿ ಶಾಸಕ ಕೆ.ಎನï.ರಾಜಣ್ಣ ಡಿಸಿಸಿ ಬ್ಯಾಂಕïನಲ್ಲಿ ತಮ್ಮ ಮಗ ರವೀಂದ್ರ ಮಾಲೀಕತ್ವದ ಅನಂತಮï ಗೃಹ ನಿರ್ಮಾಣ ಮಂಡಳಿಗೆ ಹಾಗೂ ಬೆಳಗಾವಿ ಸೌಭಾಗ್ಯಲಕ್ಷ್ಮೀ ಶುಗರ್ಸï ಕಾರ್ಖಾನೆ ಸೇರಿದಂತೆ ಅನೇಕ ಶ್ರೀಮಂತರಿಗೆ ಕೋಟಿ ಕೋಟಿ ಸಾಲ ನೀಡಿದ್ದಾರೆ ಎಂದು ಮುಖಂಡರಾದ ರೇವಣ್ಣ ಸಿದ್ದಯ್ಯ ತಿಳಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕï ಅಧ್ಯಕ್ಷರಾಗಿ ನಿಯಮಗಳನ್ನು ಉಲ್ಲಂಘಿಸಿ ಸಾಲ ಮಂಜೂರಾತಿ ಮಾಡಿರುವುದರಿಂದಲೇ ಬ್ಯಾಂಕï ಅನ್ನು ಸೂಪರï ಸೀಡï ಮಾಡಲಾಗಿದೆಯೇ ಹೊರತು ರಾಜಕೀಯ ದ್ವೇಷದಿಂದ ಅಲ್ಲ, ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ 15 ದಿನಗಳ ಹಿಂದೆಯೇ ನೋಟೀಸï ಜಾರಿ ಮಾಡಲಾಗಿದ್ದರು, ಅದನ್ನು ಸ್ವೀಕರಿಸದೇ, ಬ್ಯಾಂಕï ಆಡಳಿತ ಮಂಡಳಿ ಸ್ಪಷ್ಟನೆ ನೀಡದೇ ಇರುವುದರಿಂದ ಸೂಪರï ಸೀಡï ಮಾಡಲಾಗಿದೆ, ಇದಕ್ಕೆ ಡಿಸಿಎಂ ಪರಮೇಶ್ವರï ಅವರನ್ನು ಹೊಣೆಗಾರರನ್ನಾಗಿ ಮಾಡುತ್ತಿರುವುದು ಸರಿಯಲ್ಲ ಎಂದರು.
ಬ್ಯಾಂಕïನ ನಿರ್ದೇಶಕರಾಗಿರುವ ಜಿ.ಜೆ.ರಾಜಣ್ಣ ಅವರ ಮಗನಿಗೆ ಕಂಟ್ರಾಕ್ಟï ಮಾಡಲು 4 ಕೋಟಿ, ತಮ್ಮ ಮಗನ ಗೃಹ ನಿರ್ಮಾಣ ಸಂಸ್ಥೆಗೆ 19 ಕೋಟಿ, ಶ್ರಿದೇವಿ ಚಾರಿಟೇಬಲï ಟ್ರಸ್ಟïಗೆ 7.50 ಕೋಟಿ ಸಾಲ ನೀಡಿದ್ದು, ಸಾಲ ಮರುಪಾವತಿ ಆಗದೇ ಇದ್ದರು,4.55 ಕೋಟಿ ಹೊಸ ಸಾಲ ನೀಡಿ, ಸಂಸ್ಥೆಯ ಸುಸ್ತಿಗೆ ಸಾಲಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ, ಹಾಗೆಯೇ ಕುಣಿಗಲïನ ಗಂಗಮ್ಮ ಎಜುಕೇಷನï ಮತ್ತು ಚಾರಿಟೇಬಲï ಟ್ರಸ್ಟïಗೆ 24.50 ಕೋಟಿ ಸಾಲ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇಂತಹ 10ಕ್ಕೂ ಹೆಚ್ಚು ಆರೋಪಗಳ ಬಗ್ಗೆ ಬ್ಯಾಂಕïನ ಆಡಳಿತ ಮಂಡಳಿ ನಿರ್ದೇಶಕರಿಗೆ ನೋಟೀಸï ನೀಡಿದ್ದರೂ, ನೋಟೀಸï ಸ್ವೀಕರಿಸಿಲ್ಲ, ಆರೋಪಗಳ ಬಗ್ಗೆ ನಿರ್ದೇಶಕರು ಸಮಜಾಯಿಷಿ ನೀಡದೇ ಇರುವುದರಿಂದ ಬ್ಯಾಂಕï ಅನ್ನು ಸೂಪರïಸೀಡï ಮಾಡಲು ಸಹಕಾರ ಸಂಘಗಳ ಜಂಟಿ ನಿಬಂಧಕರು ಆದೇಶ ಹೊರಡಿಸಿದ್ದಾರೆ, ಕಾನೂನಿಗಿಂತ ಯಾರು ದೊಡ್ಡವರಿಲ್ಲ, ಬ್ಯಾಂಕï ವ್ಯವಹಾರದ ಬಗ್ಗೆ ಸಮಗ್ರ ತನಿಖೆಯಾಗಿ ಸತ್ಯಾಂಶ ಹೊರಬರಲಿ ಎಂದರು.
ಜಿ.ಪಂ.ಸದಸ್ಯ ಕೆಂಚಮಾರಯ್ಯ ಮಾತನಾಡಿ ಬ್ಯಾಂಕï ಅವ್ಯವಹಾರದ ಬಗ್ಗೆ ಮೂವರು ಡಿ.ಆರï ಅಧಿಕಾರಿಗಳು ತನಿಖೆ ಮಾಡಿ, ಆರೋಪ ಮಾಡಿದ್ದಾರೆ, ಅವರ ಆರೋಪಗಳಿಗೆ ಸಮಜಾಯಿಷಿ ನೀಡದ ರಾಜಣ್ಣ ಅವರು ದೇವೇಗೌಡ ಹಾಗೂ ಝೀರೋ ಟ್ರಾಫಿಕïನವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಲP್ಷÁಂತರ ಜನರಿಗೆ ಶಿಕ್ಷಣವನ್ನು ನೀಡಿರುವ ವಿದ್ಯಾಸಂಸ್ಥೆಯ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದನ್ನು ಬಿಟ್ಟು, ದಾಖಲೆಗಳಿದ್ದರೆ ಪ್ರದರ್ಶಿಸಲಿ, ಸೂಪರï ಸೀಡï ಆಗಲು ನೀಡಿರುವ ಆರೋಪಗಳಿಗೆ ಉತ್ತರಿಸುವ ಬದಲು ಇನ್ನೊಬ್ಬರ ಮೇಲೆ ಆರೋಪ ಮಾಡುತ್ತಿರುವುದು ಪ್ರಭಾವಿ ರಾಜಕಾರಣಿಗೆ ಸರಿಹೊಂದುವುದಿಲ್ಲ ಎಂದು ಲೇವಡಿ ಮಾಡಿದರು.
ಪರಮೇಶ್ವರï ಅವರು ಯಾರ ಮೇಲೆಯೂ ದ್ವೇಷದ ರಾಜಕಾರಣ ಮಾಡಿದವರಲ್ಲ, ಸ್ನೇಹಿತ ಅನ್ನುವ ಕಾರಣಕ್ಕೆ ಸಾಮಾನ್ಯ ಕ್ಷೇತ್ರದಲ್ಲಿ ಮೀಸಲು ಅಭ್ಯರ್ಥಿಗೆ 4 ಬಾರಿ ಬಿ.ಫಾರಂ ನೀಡಿದ್ದಾರೆ, ದ್ವೇಷದ ರಾಜಕಾರಣ ಮಾಡುವುದಾದರೆ ಅವರನ್ನು ಮೀಸಲು ಕ್ಷೇತ್ರಕ್ಕೆ ಹೋಗಪ್ಪ ಎನ್ನಬಹುದಿತ್ತು ಅಲ್ಲವೇ? 2013ರಲ್ಲಿ ರಾಜಣ್ಣ ಅವರು ಪರಮೇಶ್ವರï ಅವರನ್ನು ಸೋಲಿಸಿದ್ದು ಪ್ರೀತಿಯಿಂದಲೇ ಹೊರತು ದ್ವೇಷದಿಂದ ಅಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಮಾರ್ಮಿಕವಾಗಿ ಹೇಳಿದರು.
ತುಮುಲï ನಿರ್ದೇಶಕ ಕೊಂಡವಾಡಿ ಚಂದ್ರಶೇಖರï ಮಾತನಾಡಿ ರಮೇಶï ಜಾರಕಿಹೊಳಿ ಮಾಲೀಕತ್ವದ ಬೆಳಗಾವಿಯ ಸೌಭಾಗ್ಯಲಕ್ಷ್ಮಿ ಶುಗರ್ಸï ಹಾಗೂ ಹರ್ಷ ಶುಗರ್ಸïಗೆ ಒಟ್ಟು 50 ಕೋಟಿ ಸಾಲ ಮಂಜೂರು ಮಾಡಲಾಗಿದೆ. ಯಾವುದೇ ಅಡಮಾನವಿಲ್ಲದೆ ನೀಡಿರುವ ಸಾಲದ ಹಣ ಇದುವರೆಗೂ ಮರುಪಾವತಿಯಾಗಿಲ್ಲ, ಈ ಕಂಪನಿಗಳಲ್ಲಿ ಷೇರುದಾರರಾಗಿರುವ ರಾಜಣ್ಣ ಹಾಗೂ ಕುಟುಂಬಸ್ಥರು ಬ್ಯಾಂಕï ಅನ್ನು ತಮ್ಮ ಒಡೆತನದಲ್ಲಿಟ್ಟುಕೊಂಡು ತಮ್ಮ ಬೆಂಬಲಿಗರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆಯೇ ಹೊರತು ಯಾವುದೇ ರೈತರು ಹಾಗೂ ಬಡವರಿಗಲ್ಲ ಹೀಗಾಗಿಯೇ ಸಹಕಾರ ಸಂಘಗಳ ನಿಬಂಧಕರು ಬ್ಯಾಂಕï ಅನ್ನು ಸೂಪರï ಸೀಡï ಮಾಡಲು ಆದೇಶಿಸಿದ್ದಾರೆ ಎಂದರು.
ನಾನು ಬ್ಯಾಂಕï ನಿರ್ದೇಶಕನಾಗಿದ್ದರು, ಆಡಳಿತ ಮಂಡಳಿ ತೀರ್ಮಾನಕ್ಕೆ ಬರುತ್ತಿದ್ದ ವಿಚಾರಗಳೇ ಬೇರೆ, ನಿರ್ಣಯವೇ ಬೇರೆ ಎನ್ನುವ ಪರಿಸ್ಥಿತಿ ಇತ್ತು, ಬ್ಯಾಂಕï ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಯಲಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಿ, ನಾನು ತಪ್ಪು ಮಾಡಿದ್ದರೆ ನನ್ನ ಮೇಲೆಯೂ ಕ್ರಮ ಜರುಗಿಸಲಿ, ನ್ಯಾಯಯುತವಾಗಿ ಬ್ಯಾಂಕï ನಡೆದುಕೊಂಡಿದ್ದರೆ ಅವರ ಬಗ್ಗೆ, ಇವರ ಬಗ್ಗೆ ತನಿಖೆ ಮಾಡಿಸುತ್ತೇನೆ ಎನ್ನದೇ, ಆರೋಪಗಳಿಗೆ ಉತ್ತರಕೊಡುತ್ತೇನೆ ಎನ್ನುತ್ತಿದ್ದರು ಎಂದರು.ಟೂಡಾ ಮಾಜಿ ಅಧ್ಯಕ್ಷ ರೆಡ್ಡಿಚಿನ್ನಯಲ್ಲಪ್ಪ, ಜಿ.ಪಂ.ಸದಸ್ಯ ನಾರಾಯಣಮೂರ್ತಿ, ಜಿಲ್ಲಾ ಕಾಂಗ್ರೆಸï ಅಧ್ಯಕ್ಷ ಆರï.ರಾಮಕೃಷ್ಣ ಮುಖಂಡರಾದ ನರಸೀಯಪ್ಪ, ವಾಲೆಚಂದ್ರು, ದಿನೇಶï, ಚಂದ್ರಶೇಖರïಗೌಡ, ಅತೀಕï ಅಹ್ಮದï, ಸೋಮಣ್ಣ, ತರುಣೇಶï ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
*ಬ್ಯಾಂಕಿನಲ್ಲಿ ಅವ್ಯವಹಾರವಾಗಿದ್ದರೆ ಪ್ರತಿ ವರ್ಷ ಆಡಿಟï ನಡೆಸುವ ಆರ್ಬಿಐ ಏನು ಮಾಡುತ್ತಿತ್ತು*
ಹೌದು ಸುಮಾರು ವರ್ಷಗಳಿಂದ ಡಿಸಿಸಿ ಬ್ಯಾಂಕಿನಲ್ಲಿ ಭಾರಿ ಅವ್ಯವಹಾರವಾಗಿದೆ ಎಂದು ಆರೋಪಿಸುತ್ತಿರುವುದು ಸರಿಯಷ್ಟೆ ಆದರೆ ವಿವಿಧ ಕಂಪನಿಗಳಿಗೆ ಹಾಗೂ ಇತರರಿಗೆ ನೂರಾರು ಕೋಟಿ ಹಣವನ್ನು ಸಾಲ ನೀಡಿದ್ದಾರೆ ಆದರೆ ವಸೂಲಿ ಆಗಿಲ್ಲ ಅಂಥವರಿಗೆ ಮತ್ತೆ ಮತ್ತೆ ಕೋಟಿ ಕೋಟಿಗಟ್ಟಲೆ ಹಣವನ್ನು ಸಾಲ ನೀಡಲಾಗಿದೆ ಎಂದು ಆರೋಪಿಸಲಾಗಿದೆ .ಆದರೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿ ವರ್ಷ ಆರ್ಬಿಐನ ಅಧಿಕಾರಿಗಳು ಬಂದು ಪರಿಶೀಲನೆ ನಡೆಸುತ್ತಾರೆ ಆಡಿಟï ನಡೆಸುವ ಅಧಿಕಾರಿಗಳು ಏಕೆ ಇದನ್ನು ಪ್ರಶ್ನೆ ಮಾಡಲಿಲ್ಲ ಹಾಗಾದರೆ ಅವ್ಯವಹಾರವಾಗಿದ್ದರೆ ರಾಜ್ಯ ಸರ್ಕಾರಕ್ಕೆ ಮತ್ತೆ ಆರ್ಬಿಐನ ಶಾಖೆಗಳಿಗೆ ಬ್ಯಾಂಕಿನಲ್ಲಿ ಅವ್ಯ ವರವಾಗಿದೆ ಕೋಟ್ಯಂತರ ರೂ ಯಾವುದೇ ದಾಖಲೆಗಳಿಲ್ಲದೆ ಸಾಲ ನೀಡಲಾಗಿದೆ ಬ್ಯಾಂಕಿನ ಆಡಳಿತ ಮಂಡಳಿಯವರ ವಿರುದ್ಧ ಕ್ರಮ ಕೈಗೊಳ್ಳಬೇಕು ತಕ್ಷಣವೇ ಡಿಸಿಸಿ ಬ್ಯಾಂಕಿನ ಅಧಿಕಾರವನ್ನು ಮೊಟಕುಗೊಳಿಸಿ ಸೂಪರï ಸ್ಪೀಡï ಮಾಡಬೇಕೆಂದು ಏಕೆ ವರದಿಯನ್ನು ನೀಡಲಿಲ್ಲ ಎಂಬ ಹತ್ತು ಹಲವು ಪ್ರಶ್ನೆಗಳು ಈಗ ಕಾಡತೊಡಗಿವೆ .ಯಾರು ಎಷ್ಟೇ ದೊಡ್ಡವರಿರಲಿ ಅವರಿಗೆ ಲP್ಷÁಂತರ ರು ಹಾಗೂ ಕೋಟಿಗಟ್ಟಲೆ ಹಣ ಸಾಲವನ್ನು ನೀಡಬೇಕಾದರೆ ದಾಖಲೆಗಳನ್ನು ಪಡೆದುಕೊಂಡು ಸಾಲ ನೀಡುವುದು ಆದರೆ ಅದು ಬೆಳಕಿಗೆ ಬಂದಿರುವುದಿಲ್ಲ .ಬ್ಯಾಂಕಿನ ಬೆಳವಣಿಗೆಗೆ ಹಾಗೂ ಅಭಿವೃದ್ಧಿಯ ದೃಷ್ಟಿಯಲ್ಲಿ ಹಣವನ್ನು ಸಾಲ ನೀಡುವುದು ಸಹಜ ಆದರೆ ಅಷ್ಟಕ್ಕೆ ಅವ್ಯವಹಾರವಾಗಿದೆ ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ನಿವೃತ್ತ ಬ್ಯಾಂಕಿನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು .
*ಬ್ಯಾಂಕುಗಳ ಅಭಿವೃದ್ಧಿಯಾಗಬೇಕೆಂದರೆ ಇಂತಹ ಕ್ರಮಗಳು ಅನಿವಾರ್ಯ ಹೆಸರಾಂತ ಉದ್ಯಮಿಯ ಅಭಿಪ್ರಾಯ*
ದೇಶದ ಬ್ಯಾಂಕï ಗಳ ವಹಿವಾಟಿನಲ್ಲಿಯೇ ಅತಿ ಹೆಚ್ಚು ಹೆಸರಾಗಿರುವ ತುಮಕೂರಿನ ಮರ್ಚೆಂಟï ಕೋಪರೇಟಿವï ಸೊಸೈಟಿ ಅಧ್ಯಕ್ಷರಾಗಿರುವ ಎನï ಎಸï ಜೈ ಕುಮಾರï ಅವರು ಡಿಸಿಸಿ ಬ್ಯಾಂಕï ತನ್ನ ಸೂಪರï ಸ್ಪೀಡï ಮಾಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಹೀಗೆ ನುಡಿ ಬ್ಯಾಂಕï ಅನ್ನು ಸೂಪರï ಸ್ಪೀಡï ಮಾಡಿರುವ ವಿಚಾರವಾಗಿ ಎಲ್ಲ ರೀತಿಯ ಕೋನಗಳಲ್ಲಿ ಗಮನಿಸಿದರೆ ಇದೊಂದು ರಾಜಕೀಯ ದ್ವೆಷವೊಂದು ಎಲ್ಲರಿಗೂ ಮನದಟ್ಟಾಗುತ್ತದೆ ಹೇಗೆ ಅಂತೀರಾ .ಅಧಿಕಾರಿಗಳು ಒಂದೊಂದು ಸರ್ಕಾರವಿದ್ದಾಗ ಒಂದೊಂದು ರೀತಿ ಅವರ ಕಡೆ ವಾಲುತ್ತಾರೆ ಅಥವಾ ಮಾಹಿತಿ ನೀಡುತ್ತಾರೆ ಇದು ಎಲ್ಲರಿಗೂ ಗೊತ್ತಿರುವ ವಿಚಾರ .ಡಿಸಿಸಿ ಬ್ಯಾಂಕಿನಲ್ಲಿ ಆಗಿರುವುದು ಇದೇ ಲP್ಷÁಂತರ ರು ಹಾಗೂ ಕೋಟಿಗಟ್ಟಲೆ ಹಣವನ್ನು ಬೇರೆಯವರಿಗೆ ಸಾಲ ಕೊಡಬೇಕಾದರೆ ರಾಜಣ್ಣ ಏನು ದಡ್ಡರಲ್ಲ ಅವರು ಬ್ಯಾಂಕಿಗೆ ಎಲ್ಲ ರೀತಿಯ ಅದ ಮಾನವನ್ನು ಇಟ್ಟುಕೊಂಡೇ ಸಾಲ ನೀಡುವುದು .ಒಂದನ್ನು ನಾವು ಆಗಲಿ ನೀವಾಗಲಿ ಗಮನಿಸಬೇಕಾಗಿದೆ ಏನಪ್ಪಾ ಅಂದ್ರೆ ಯಾವುದೇ ಸಹಕಾರಿ ಸಂಘಗಳಾಗಲಿ ಬ್ಯಾಂಕುಗಳಾಗಲಿ ಪ್ರತಿವರ್ಷ ಆರ್ಬಿಐನ ಅಧಿಕಾರಿಗಳು ಬಂದು ಪರಿಶೀಲನೆ ನಡೆಸುತ್ತಾರೆ ಅಂದರೆ ಆಡಿಟï ಮಾಡುತ್ತಾರೆ ಹಾಗಾದರೆ ಬ್ಯಾಂಕಿನಲ್ಲಿ ಅವ್ಯವಹಾರವಾಗಿದ್ದರೆ ಅವರು ಏಕೆ ಸುಮ್ಮನಿದ್ದರೂ ಅವರೇಕೆ ಸೂಪರï ಸ್ಪೀಡï ಮಾಡಲು ಶಿಫಾರಸು ಮಾಡಲಿಲ್ಲ ಇದರಲ್ಲಿಯೇ ಗೊತ್ತಾಗುತ್ತದೆ ಇದು ವ್ಯವಸ್ಥಿತವಾದ ಪಿತೂರಿ ಎಂದು ಎಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು