ಬೆಂಗಳೂರು, ಜು.24- ಅತೃಪ್ತ ಶಾಸಕರು ರಾಜೀನಾಮೆ ನೀಡಿ ಮುಂಬೈ ಹೋಟೆಲïಗೆ ಹೋಗುತ್ತಿದ್ದಂತೆ ಬಿಜೆಪಿ ನಾಯಕರು ತಮ್ಮ ಶಾಸಕರನ್ನು ರಮಾಡ ರೆಸಾರ್ಟ್ನಲ್ಲಿ ಇರಿಸಿದ್ದರು.
ನಿನ್ನೆ ಮೈತ್ರಿ ಸರ್ಕಾರ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗುತ್ತಿದ್ದಂತೆ ಬಿಜೆಪಿ ಶಾಸಕರು ತಮ್ಮ ರೂಂಗಳನ್ನು ಖಾಲಿ ಮಾಡಿ ಮನೆ ಸೇರಿಕೊಂಡಿದ್ದಾರೆ.16 ದಿನಗಳ ಬಿಜೆಪಿ ರೆಸಾರ್ಟ್ ವಾಸಕ್ಕೆ ಅಂತೂ ತೆರೆಬಿದ್ದಿದೆ.ಯಲಹಂಕದ ಬಳಿ ಇದ್ದ ರಮಾಡ ರೆಸಾರ್ಟ್ನಲ್ಲಿ ಬೀಡುಬಿಟ್ಟಿದ್ದ ಬಿಜೆಪಿ ಶಾಸಕರನ್ನು ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡುವವರೆಗೆ ಹೊರಗೆ ಬಿಡದಿರಲು ಬಿ.ಎಸ್. ಯಡಿಯೂರಪ್ಪ ನಿರ್ಧರಿಸಿದ್ದರು.ಕಳೆದ 16 ದಿನಗಳಿಂದ ರೆಸಾರ್ಟ್ನಲ್ಲಿದ್ದ ಶಾಸಕರು ಇದೀಗ ಮನೆಯತ್ತ ಮುಖ ಮಾಡಿದ್ದಾರೆ.
ರಾತ್ರಿ ರೆಸಾರ್ಟ್ನಲ್ಲಿ ವಿಜಯೋತ್ಸವ ಆಚರಿಸಿದ್ದ ಬಿಜೆಪಿ ಶಾಸಕರು ಬಳಿಕ ತಮ್ಮ ರೂಂಗಳನ್ನು ಖಾಲಿ ಮಾಡಿ ಮನೆಗೆ ತೆರಳಿದ್ದಾರೆ.
ಬೇರೆ ಬೇರೆ ಜಿಲ್ಲೆಯ ಶಾಸಕರು ಹೋಟೆಲïಗಳು ಮತ್ತು ಶಾಸಕರ ಭವನದ ಕೊಠಡಿಗಳಿಗೆ ತೆರಳಿದ್ದಾರೆ.ಹೀಗಾಗಿ, 16 ದಿನಗಳಿಂದ ತುಂಬಿ ತುಳುಕುತ್ತಿದ್ದ ರಮಾಡ ರೆಸಾರ್ಟ್ ಖಾಲಿ ಹೊಡೆಯುತ್ತಿದೆ.
ರಮಾಡ ಹೋಟೆಲ್ ಜೊತೆಗೆ ಸಾಯಿಲೀಲಾ ಹೋಟೆಲ್ನಲ್ಲಿ ಉಳಿದಿದ್ದ ಬಿಜೆಪಿ ಶಾಸಕರು ಕೂಡ ನಿನ್ನೆ ಜಾಗ ಖಾಲಿ ಮಾಡಿದ್ದಾರೆ.ಇಂದು ನಾಯಕರ ಅನುಮತಿ ಪಡೆದು ತಮ್ಮ ಕ್ಷೇತ್ರಗಳಿಗೆ ತೆರಳಲು ಶಾಸಕರು ಚಿಂತನೆ ನಡೆಸಿದ್ದಾರೆ.
ಯಡ್ಯೂರಪ್ಪ ಮತ್ತೆ ಯಡಿಯೂರಪ್ಪ; ಹೊಸ ಸರ್ಕಾರ ನಿರ್ಮಾಣದ ಹೊಸ್ತಿಲಲ್ಲಿ ಹಳೆಯ ಹೆಸರುನಿನ್ನೆ ರಾಜ್ಯದ ರಾಜಕೀಯ ಬಿಕ್ಕಟ್ಟಿಗೆ ತೆರೆ ಬಿದ್ದಿರುವುದರಿಂದ ಮೂರೂ ಪಕ್ಷಗಳ ಶಾಸಕರಿಗೆ ರೆಸಾರ್ಟ್ ವಾಸದಿಂದ ಮುಕ್ತಿ ಸಿಗುವ ಸಮಯ ಸನ್ನಿಹಿತವಾಗಿದೆ.
ಮುಂಬೈನ ರೆನೈಸೆನ್ಸ್ ಹೋಟೆಲ್ನಲ್ಲಿರುವ ಅತೃಪ್ತ ಶಾಸಕರು ಕೂಡ ಸದ್ಯದಲ್ಲೇ ರಾಜ್ಯಕ್ಕೆ ಮರಳುವ ಸಾಧ್ಯತೆಯಿದೆ.