- ಸರ್ಕಾರಕ್ಕೆ ವಿಶ್ವಾಸಮತವಿಲ್ಲ ಎಂಬ ಆರೋಪ ಕೇಳಿಬರುತ್ತಲೇ ಮೈತ್ರಿ ಸರ್ಕಾರದ ವಿರುದ್ಧ ಸಿಡಿದು ಆಹೋರಾತ್ರಿ ಪ್ರತಿಭಟನೆ ನಡೆಸಿ ಸ್ವಾಭವಿಕವಾಗಿ ಆರ್ಭಟಿಸುತ್ತಿದ್ದ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಈ ಭಾರಿ ಸದನದಲ್ಲಿ ಮೌನವಾಗಿಯೇ ವಿಶ್ವಾಸಮತ ಗೆದ್ದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಎಷ್ಟೆಲ್ಲಾ ಆರ್ಭಟಿಸಿದರೂ ತಮ್ಮ 14 ತಿಂಗಳ ಸರ್ಕಾರವನ್ನು ಉಳಿಸಿಕೊಳ್ಳಲಾಗದೇ ವಿಶ್ವಾಸಮತದಲ್ಲಿ ಸೋಲು ಅನುಭವಿಸಿದರು.
ವಾರಕಾಲ ಮುಸುಕಿನ ಗುದ್ದಾಟದಲ್ಲಿಯೇ ನಡೆದ ವಿಧಾನಮಂಡಲ ಅಧಿವೇಶನ ಅಭಿವೃದ್ಧಿ ಚರ್ಚೆಗೆ ಬದಲಾಗಿ ಪರಸ್ಪರ ದೂಷಣೆ, ಕೀಳು ರಾಜಕೀಯದ ವರ್ತನೆಗಳು ಮತ್ತು ಮತದಾರರಿಗೆ ಬೇಸರಗೊಳಿಸಿದ ಚಿತ್ರಣಗಳೆ ತುಂಬಿದ್ದವು. ಕೊನೆಗೆ ಸ್ಪೀಕರ್ ಸಹ ಬೇಸರಗೊಂಡು ವಿಶ್ವಾಸಮತ ಕೋರದಿದ್ದರೆ ತಾವೇ ರಾಜೀನಾಮೆ ಸಲ್ಲಿಸುವ ಬೆದರಿಕೆ ಪರಿಣಾಮವಾಗಿ ನಾಲ್ಕು ದಿನ ತಡವಾಗಿ ಕೋರಿದ ವಿಶ್ವಾಸಮತದಲ್ಲಿ ಸಭಾನಾಯಕ ಕುಮಾರಸ್ವಾಮಿಯವರ ಪರವಾಗಿ 99 ಮತ್ತು ವಿರೋಧವಾಗಿ 105 ಮತಗಳು ಚಲಾವಣೆಯಾಗಿ ಸರ್ಕಾರ ಪತನಗೊಂಡು ಮುಖ್ಯಮಂತ್ರಿ ರಾಜ್ಯಪಾಲರಿಗೆ ರಾತ್ರಿ ರಾಜೀನಾಮೆ ಸಲ್ಲಿಸಿದರು.
————————————————————————————