ನಾಳೆ ಮೈತ್ರಿ ಸರ್ಕಾರ ಅಂತ್ಯವಾಗಲಿದೆ-ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ

ಕೋಲಾರ, ಜು.21-ನಾಳೆ ಅತೃಪ್ತಿಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಂತ್ಯವಾಗಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

ನಾಳೆ ವಿಧಾನಸಭೆಯಲ್ಲಿ ವಿಶ್ವಾಸ ಮತಕ್ಕೆ ಹಾಕುವುದಾಗಿ ಮುಖ್ಯಮಂತ್ರಿ ಹಾಗೂ ಸ್ಪೀಕರ್ ಎಲ್ಲರೂ ಹೇಳಿದ್ದಾರೆ. ಆದರೆ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಶಾಸಕರಲ್ಲಿ ಅತೃಪ್ತಿ ಇರುವುದರಿಂದಲೇ ವಿಶ್ವಾಸಮತಯಾಚನೆ ಮಾಡುತ್ತಿದ್ದಾರೆ. ನಾಳೆ ಎಲ್ಲ ಕೊನೆಗೊಳ್ಳಲಿದೆ ಎಂದರು.
ರಾಜ್ಯದ ಜನರಿಗೆ ಒಳ್ಳೆಯದಾಗಲಿ ಎಂಬ ದೃಷ್ಟಿಯಿಂದ ವಿಶೇಷ ಪೂಜೆ ಸಲ್ಲಿಸಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೈತ್ರಿ ಸರ್ಕಾರವಲ್ಲ, ಮತ್ತೊಬ್ಬರನ್ನು ಮುಗಿಸಲು ಹೊರಟಿರುವ ಸರ್ಕಾರ ಇದು ಎಂದು ಮಾಜಿ ಸಚಿವ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಮುಳಬಾಗಿಲಿನ ಕುರುಡಮಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುಶ್ಮನ್‍ಗಳ ನಡುವೆ ದೋಸ್ತಿ ಇರಲು ಹೇಗೆ ಸಾಧ್ಯ?ದೋಸ್ತಿ ಇದ್ದಿದ್ದರೆ ಮೈತ್ರಿ ಸರ್ಕಾರಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದರು.
ಆಪರೇಷನ್ ಕಮಲದ ದೃಷ್ಟಿ ನಮಗಿಲ್ಲ. ಅದರ ಅವಶ್ಯಕತೆಯೂ ಇಲ್ಲ. ಕಾಲ ಕಾಲಕ್ಕೆ ರಾಜಕೀಯ ಧೃವೀಕರಣ ನಡೆಯುತ್ತದೆ.ಸಿದ್ದರಾಮಯ್ಯನವರು ಜೆಡಿಎಸ್ ಬಿಟ್ಟು ಕಾಂಗ್ರೆಸ್‍ಗೆ ಹೋಗಿಲ್ಲವೇ ಎಂದು ಪ್ರಶ್ನಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ