ಬೆಂಗಳೂರು,ಜು.19-ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಅವರು ತಾವು ಅಪಹರಣಕ್ಕೆ ಒಳಗಾಗಿಲ್ಲ. ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪತ್ರ ಬರೆದಿದ್ದಾರೆ ಎಂದು ಪತ್ರ ಬರೆದಿದ್ದಾರೆ ಎಂದು ವಿಧಾನಸಭಾಧ್ಯಕ್ಷ ರಮೇಶ್ಕುಮಾರ್ ತಿಳಿಸಿದರು.
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸಿರುವ ವಿಶ್ವಾಸಮತಯಾಚನೆ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಶ್ರೀಮಂತ್ ಪಾಟೀಲ್ ಬರೆದಿರುವ ಪತ್ರವನ್ನು ಸಭಾಧ್ಯಕ್ಷರು ವಾಚಿಸಿದರು.
ಬೆಂಗಳೂರಿನ ರೆಸಾರ್ಟ್ನಿಂದ ತುರ್ತು ಕಾರ್ಯದ ನಿಮಿತ್ತ ಜು.17ರಂದು ಚೆನ್ನೈಗೆ ತೆರಳಿದ್ದು, ಆಗ ಎದೆನೋವು ಕಾಣಿಸಿಕೊಂಡಿತ್ತು.ವೈದ್ಯರ ಸಲಹೆ ಮೇರೆಗೆ ಮುಂಬೈ ಆಸ್ಪತ್ರೆಗೆ ದಾಖಲಾಗಿರುವುದಾಗಿ ಉಲ್ಲೇಖಿಸಿದ್ದಾರೆ.ಇದು ಪೂರ್ವ ನಿಯೋಜಿತವಾಗಿದ್ದರೆ ಲೆಟರ್ಹೆಡ್ನಲ್ಲಿ ಪತ್ರ ಬರೆಯುತ್ತಿದ್ದೆ. ಹಠಾತ್ ಘಟನೆಯಾದರಿಂದ ವಿನಂತಿಸುತ್ತಿದ್ದೇನೆ. 15ನೇ ವಿಧಾನಸಭೆಯ 4ನೇ ಅಧಿವೇಶನದ ಇನ್ನುಳಿದ ಕಾರ್ಯಕಲಾಪಗಳಿಗೆ ಗೈರಾಗಲು ಅನುಮತಿ ಕೋರಿ ಪತ್ರ ಬರೆದಿದ್ದಾರೆ. ಇದರ ಬಗ್ಗೆ ತಾವು ತೀರ್ಮಾನ ಕೈಗೊಳ್ಳುವುದಾಗಿ ಸಭಾಧ್ಯಕ್ಷರು ಹೇಳಿರು.