ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿಯವರ ಸಹೋದರ ಆನಂದ್ ಕುಮಾರ್-ಐಟಿ ಇಲಾಖೆಯಿಂದ ಆನಂದ್ ಕುಮಾರ್‍ಗೆ ಸೇರಿದ ಬೇನಾಮಿ ಆಸ್ತಿ ಜಪ್ತಿ

ನವದೆಹಲಿ, ಜು.18– ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಹುಜನ ಸಮಾಜ ಪಕ್ಷ(ಬಿಎಸ್‍ಪಿ)ದ ಮುಖ್ಯಸ್ಥೆ ಮಾಯಾವತಿ ಸೋದರನಿಗೆ ಸೇರಿದ ನೋಯ್ಡಾದಲ್ಲಿನ ಸುಮಾರು 400 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿಯನ್ನು ಆದಾಯ ತೆರಿಗೆ ಅಧಿಕಾರಿಗಳು ಇಂದು ಜಪ್ತಿ ಮಾಡಿದ್ದಾರೆ.

ನೋಯ್ಡಾದಲ್ಲಿದ್ದ ಏಳು ಎಕರೆ ಜಮೀನು ಮಾಯಾವತಿ ಸಹೋದರ ಆನಂದ್ ಕುಮಾರ್ ಮತ್ತು ಅವರ ಪತ್ನಿ ವಿಚಿತೆರ್ ಲತಾ ಅವರಿಗೆ ಸೇರಿದ ಆಸ್ತಿಯನ್ನು ಅಕ್ರಮ ಬೇನಾಮಿ ಆಸ್ತಿ ಎಂದು ದೆಹಲಿಯ ಬೇನಾಮಿ ನಿಷೇಧ ಘಟಕ(ಬಿಪಿಯು) ಘೋಷಿಸಿತ್ತು. ಅಲ್ಲದೇ ಈ ಬೇನಾಮಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶ ನೀಡಿತ್ತು.

ಮಾಯಾವತಿ ಇತ್ತೀಚೆಗಷ್ಟೇ ತಮ್ಮ ಸಹೋದರ ಆನಂದಕುಮಾರ್ ಅವರನ್ನು ಬಿಎಸ್‍ಪಿ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ