ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್‍ರ ಹೆಸರನ್ನು ಭೀಮಾ ರಾವ್ ರಾಮ್‍ಜೀ ಅಂಬೇಡ್ಕರ್ ಎಂದು ಬಳಸಬೇಕು – ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್

ಲಕ್ನೋ, ಮಾ. 29- ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರೊಂದಿಗೆ ಈಗ ಅವರ ತಂದೆ ರಾಮ್‍ಜೀ ಹೆಸರು ಕೂಡ ಸೇರ್ಪಡೆಯಾಗಿದೆ.
ಇಂದು ಮುಂದೆ ಉತ್ತರಪ್ರದೇಶದ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಅಂಬೇಡ್ಕರ್‍ರ ಹೆಸರನ್ನು ಭೀಮಾ ರಾವ್ ರಾಮ್‍ಜೀ ಅಂಬೇಡ್ಕರ್ ಎಂದು ಬಳಸಬೇಕೆಂದು ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಆದೇಶ ನಡೆಸಿದ್ದಾರೆ.
ಉತ್ತರ ಪ್ರದೇಶದ ರಾಜ್ಯಪಾಲ ರಾಮ್‍ನಾಯ್ಕ್ ಅವರು ಅಂಬೇಡ್ಕರ್‍ರ ಹೆಸರಿನೊಂದಿಗೆ ಅವರ ತಂದೆ ರಾಮ್‍ಜೀ ಹೆಸರನ್ನು ಸೇರ್ಪಡೆ ಮಾಡಬೇಕೆಂದು ಕಳೆದ 2017ರಲ್ಲೇ ಪ್ರಧಾನಿ ನರೇಂದ್ರಮೋದಿ ಹಾಗೂ ಮುಖ್ಯಮಂತ್ರಿ ಆದಿತ್ಯನಾಥ್‍ರಿಗೆ ಪತ್ರ ಬರೆದಿದ್ದರು. ರಾಮ್‍ನಾಯ್ಕ್ ಅವರ ಪತ್ರದ ಅನ್ವಯ
ಇನ್ನು ಮುಂದೆ ಉತ್ತರ ಪ್ರದೇಶದ ಎಲ್ಲಾ ಸರ್ಕಾರಿ ಇಲಾಖೆಗಳಲ್ಲೂ ಅಂಬೇಡ್ಕರ್ ಹೆಸರಿನೊಂದಿಗೆ ರಾಮ್‍ಜೀ ಹೆಸರನ್ನು ಸೇರ್ಪಡೆ ಮಾಡಬೇಕೆಂದು ಅದೇಶಿಸಿದ್ದಾರೆ. ಆದರೆ ಎಸ್‍ಪಿ ಮುಖಂಡ ದೀಪಕ್ ಮಿಶ್ರಾ ಅವರು ಯೋಗಿ ಆದಿತ್ಯನಾಥ್‍ರ ಈ ನಡೆಯನ್ನು ಖಂಡಿಸಿ, ಆರ್‍ಎಸ್‍ಎಸ್‍ಗೆ ಸಂವಿಧಾನಶಿಲ್ಪಿ ಅಂಬೇಡ್ಕರ್ ಬಗ್ಗೆ ಯಾವುದೇ ಗೌರವಭಾವವಿಲ್ಲ , ಈಗ ಅವರು ಅಂಬೇಡ್ಕರ್ ಜೊತೆಗೆ ಅವರ ತಂದೆ ರಾಮ್‍ಜೀ ಹೆಸರನ್ನು ಸೇರಿಸಿರುವುದು ಆ ಜನಾಂಗದ ಮತದಾರರ ದಾರಿ ತಪ್ಪಿಸುವುದಕ್ಕಾಗಿ ಎಂದು ಕಿಡಿಕಾರಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಆರ್‍ಎಸ್‍ಎಸ್ ಮುಖಂಡ ರಾಕೇಶ್ ಸಿನ್ಹಾ, ಯೋಗಿ ಸರ್ಕಾರ ಅಂಬೇಡ್ಕರ್‍ರ ಮೂಲ ಹೆಸರಿನೊಂದಿಗೆ ಅವರ ತಂದೆಯ ಹೆಸರನ್ನು ಸೇರ್ಪಡೆ ಮಾಡಲು ಮೊದಲು ನಿರ್ಧರಿಸಿತ್ತು, ಇದಕ್ಕೆ ಸರ್ಕಾರ ಅಲಹಾಬಾದ್ ಹೈಕೋರ್ಟ್ ಹಾಗೂ ಲಖನೌ ವಿಶೇಷ ನ್ಯಾಯಾಲಯದ ಒಪ್ಪಿಗೆಯನ್ನು ಪಡೆದೇ ಸಂವಿಧಾನಶಿಲ್ಪಿಯ ಹೆಸರಿನೊಂದಿಗೆ ಅವರ ತಂದೆಯ ಹೆಸರನ್ನು ಸೇರಿಸಿ ದಾಖಲೆಯನ್ನು ತಿದ್ದುಪಡಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ