ಸರ್ಕಾರದ ಯೋಜನೆಗಳನ್ನು ಯುವಕರು ಉಪಯೋಗಿಸಕೊಳ್ಳಬೇಕು : ಸಚಿವೆ ನಿರ್ಮಲಾ ಸೀತಾರಾಮನ್

ದೆಹಲಿ,ಜು.15-ಯುವಕರು ತಮ್ಮ ಕೌಶಲ್ಯಗಳನ್ನು ಸುಧಾರಿಸಲು ಸರ್ಕಾರದ ಹಲವಾರು ಯೋಜನೆಗಳ ಲಾಭವನ್ನು ಪಡೆದುಕೊಳ್ಳುವಂತೆ ಹೇಳಿದರು. ಸ್ಕಿಲ್ ಇಂಡಿಯಾ ಮಿಷನ್‍ನ ನಾಲ್ಕನೇ ವಾರ್ಷಿಕೋತ್ಸವದ ನೆನಪಿಗಾಗಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರವು ಪಾರಂಭಿಸಿರುವ ವಿವಿಧ ಯೋಜನೆಗಳ ಲಾಭವನ್ನು ಪಡೆದುಕೊಳ್ಳುವ ಮೂಲಕ ಯುವಕರು ಹೆಚ್ಚು ನುರಿತವರಾಗಬಹುದು ಎಂದು ಸಚಿವರು ಹೇಳಿದರು.

ಉತ್ತಮ ಫಲಿತಾಂಶಗಳನ್ನು ಸಾಧಿಸಲು ಯುವಕರು ತಮ್ಮ ಕೌಶಲ್ಯಗಳನ್ನು ಅನ್ವೇಶಿಸಬೇಕು ಮತ್ತು ಹೆಚ್ಚು ಪರಿಣಿತಿ ಪಡೆಯಬೇಕು ಎಂದು ಸಚಿವರು ಹೇಳಿದರು.

ದೇಶದ ಯುವಜನತೆಯಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ಕೇಂದ್ರ ಸರ್ಕಾರ ಉತ್ತೇಜಿಸುತ್ತಿದೆ ಎಂದು ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಡಾ.ಮಹೇಂದ್ರನಾಥ್ ಪಾಂಡೆ ಹೇಳಿದರು. ಯುವಕರು ನುರಿತವರಾಗಿದ್ದರೆ ಇತರರಿಗೂ ಉದ್ಯೋಗವನ್ನು ಒದಗಿಸಲು ಸಹಾಯ ಮಾಡಬಹುದು ಎಂದು ಸಚಿವರು ಹೇಳಿದರು.

ಭ್ರಷ್ಟಚಾರವನ್ನು ಕೊನೆಗೊಳಿಸಲು ಡಿಜಿಟಲ್ ಇಂಡಿಯಾದಿಂದ ಸಹಾಯವಾಗುತ್ತದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.

ಅವಕಾಶಗಳಿಗಾಗಿ ಹೊಸ ಕ್ಷೇತ್ರಗಳನ್ನು ಸ್ಪರ್ಶಿಸುವ ಅವಶ್ಯಕತೆಯಿದೆ ಮತ್ತು ನುರಿತ ಜನಸಂಖ್ಯೆಯ ಮೂಲಕ ಇದನ್ನು ಮಾಡಬಹುದು. ಭಾರತವು ಕೌಶಲ್ಯಗಳ ದೊಡ್ಡ ರಾಜಧಾನಿಯಾಗುವತ್ತ ಸಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್, ಭಾರತವು ನುರಿತ ಬಲದಿಂದಾಗಿ ವಿಶ್ವ-ಗುರುವಾಗಿ ಮುಂದುವರಿಯಲಿದೆ. ಭವಿಷ್ಯದಲ್ಲಿ ಅಪಾರ ಅವಕಾಶಗಳಿವೆ, ಆದ್ದರಿಂದ ಕೌಶಲ್ಯ ಅಭಿವೃದ್ಧಿಯ ಅವಶ್ಯಕತೆಯಿದೆ ಎಂದು ಸಚಿವರು ಹೇಳಿದರು.

ಜನತೆಗೆ ಉತ್ತಮ ಜೀವನೋಪಾಯವನ್ನು ಪಡೆಯಲು ಮತ್ತು ಬಡತನವನ್ನು ಕೊನೆಗೊಳಿಸಲು ಸಹಾಯ ಮಾಡುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ