ಬೆಂಗಳೂರು,ಜು.11-ಮುಂಬೈಗೆ ಹೊರಟಿದ್ದ ಅತೃಪ್ತ ಶಾಸಕರಿಬ್ಬರು ತಮ್ಮ ಪ್ರವಾಸ ರದ್ದುಪಡಿಸಿದ್ದಾರೆ.
ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎಂಟಿಬಿ ನಾಗರಾಜ್ ಹಾಗೂ ಕೆ.ಸುಧಾಕರ್ ಇಂದು ಮುಂಬೈಗೆ ತೆರಳಿ ಅತೃಪ್ತ ಶಾಸಕರ ಪಡೆಯನ್ನು ಸೇರುವವರಿದ್ದರು.
ಆದರೆ ಇಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರು ಬೆಂಗಳೂರಿಗೆ ಹಿಂದಿರುಗುತ್ತಿರುವುದರಿಂದ ಈ ಇಬ್ಬರು ಶಾಸಕರು ತಮ್ಮ ಪ್ರವಾಸ ಮೊಟಕುಗೊಳಿಸಿ ಇಲ್ಲೇ ಉಳಿದಿದ್ದಾರೆ.