ಬೆಂಗಳೂರು,ಜು.11- ಶಾಸಕರಲ್ಲಿ ಕೆಲವರಿಗೆ ವಾಪಸ್ ಬರುವ ಮನಸ್ಸಿದೆ. ಇನ್ನು ಕೆಲವರಿಗೆ ಮರಳಿ ಬರುವ ಮನಸ್ಸಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೆಗೌಡ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದ ಶಾಸಕರನ್ನು ಭೇಟಿ ಮಾಡಲು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮತ್ತು ನಾವು ಹೋಗಿದ್ದೆವು. ಆದರೆ ಅವಕಾಶ ಸಿಗಲಿಲ್ಲ. ನಾವು ಬುಕ್ ಮಾಡಿದ ರೂಮ್ ಸಹ ರದ್ದು ಮಾಡಿದರು.
ನಾವು ಆಯುಧ ಇಟ್ಟುಕೊಂಡು ಹೋಗಿರಲಿಲ್ಲ. ಮಾಜಿ ಮುಖ್ಯಮಂತ್ರಿ ಆರ್.ಅಶೋಕ್ ಹೋಟೆಲ್ನಲ್ಲೇ ಇದ್ದರು. ಆದರೆ ನಮ್ಮನ್ನು ಮಾತ್ರ ಬಿಡಲಿಲ್ಲ ಎಂದು ಜಿಟಿಡಿ ಹೇಳಿದರು.