ಜನಸ್ನೇಹಿ ಮತ್ತು ಅಭಿವೃದ್ಧಿ ಸ್ನೇಹಿ ಬಜೆಟ್-ಪ್ರಧಾನಿ ಮೋದಿ

ನವದೆಹಲಿ, ಜು.5- ಇಂದು ಮಂಡನೆಯಾಗಿರುವ ಕೇಂದ್ರ ಬಜೆಟ್ ಜನಸ್ನೇಹಿ ಮತ್ತು ಅಭಿವೃದ್ಧಿ ಸ್ನೇಹಿ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿಸಿದ್ದಾರೆ.

ಇಂದು ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2019-20 ಸಾಲಿನ ಮುಂಗಡ ಪತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಎಲ್ಲ ವಲಯಗಳಿಗೂ ಆದ್ಯತೆ ನೀಡಿರುವ ಅತ್ಯುತ್ತಮ ಬಜೆಟ್ ಇದಾಗಿದೆ ಎಂದು ಬಣ್ಣಿಸಿದರು.

ಜನತೆಯ ನಿರೀಕ್ಷೆಗೂ ಮೀರಿ ಅವರ ಅಪೇಕ್ಷೆಗಳಿಗೆ ಅನುಗುಣವಾದ ಅಂಶಗಳು ಈ ಬಜೆಟ್‍ನಲ್ಲಿವೆ. ಇದೊಂದು ಪ್ರಗತಿದಾಯಕ ಮತ್ತು ಸುಧಾರಣೆ ದೃಷ್ಟಿಕೋನದ ಆಯವ್ಯಯ ಪತ್ರ ಎಂದು ಪ್ರಧಾನಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ