ಬೆಂಗಳೂರು, ಜು.5- ನಗರದ ವಿವಿಧ ಬಡಾವಣೆಗಳಲ್ಲಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಸಾರ್ವಜನಿಕರು ಓಡಾಡುವುದೇ ದುಸ್ತರವಾಗಿಬಿಟ್ಟಿದೆ.
ಕುರುಬರಹಳ್ಳಿಯ ವೆಂಕಟೇಶ್ವರ ಲೇಔಟ್ ಅರವಿಂದ್ ಶಾಲೆ ವಾರ್ಡ್ 75ರಲ್ಲಿ ಮತ್ತು ಅಂಬೇಡ್ಕರ್ ಕಾಲೇಜು ಸುತ್ತಮುತ್ತ ಬೀದಿನಾಯಿಗಳ ಕಾಟ ತಾಳಲಾಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ರಾತ್ರಿ ವೇಳೆ ದ್ವಿಚಕ್ರ ವಾಹನ ಸವಾರರು ಹೋಗುವಾಗ ಏಕಾಏಕಿ ಬೀದಿನಾಯಿಗಳು ದಾಳಿ ಮುಂದಾಗುತ್ತವೆ. ಇದರಿಂದ ನಿಯಂತ್ರಣ ತಪ್ಪಿ ಸವಾರರು ಬಿದ್ದು ಗಾಯಗೊಂಡಿರುವ ಸಾಕಷ್ಟು ಉದಾಹರಣೆಗಳಿವೆ.
ಅಲ್ಲದೆ ಶಾಲಾ ಮಕ್ಕಳು ಈ ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದೆ. ಪೋಷಕರು ಇದರಿಂದ ಆತಂಕಕ್ಕೊಳಗಾಗಿದ್ದಾರೆ.ಒಟ್ಟೊಟ್ಟಿಗೆ 8-10ನಾಯಿಗಳ ಹಿಂಡು ಒಮ್ಮೆಗೆ ಸವಾರರತ್ತ ಬೊಗಳುತ್ತ ನುಗ್ಗುತ್ತವೆ. ವಾಹನ ಚಲಾಯಿಸುವುದೇ ಕಷ್ಟವಾಗಿದೆ.
ತಕ್ಷಣ ಬಿಬಿಎಂಪಿಯವರು ಬೀದಿನಾಯಿಗಳನ್ನು ಹಿಡಿದು ದೂರ ಸಾಗಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆಂದು ಮನವಿ ಮಾಡಲಾಗಿದೆ.