ಕೆ.ಎ.ಸ್.ಅಭ್ಯರ್ಥಿಗಳ ಸಂದರ್ಶನದ ದಿನಾಂಕವನ್ನು ಪ್ರಕಟಿಸ ಬೇಕೆಂದು ಆಗ್ರಹಿಸಿ ಇಂದು ಬೆಳಿಗ್ಗೆ 8.00 ಗಂಟೆಯಿಂದ ನಾನು ಕೆ ಪಿ ಎಸ್ ಸಿ ಎದುರು #ಉಪವಾಸ_ಸತ್ಯಾಗ್ರಹ ಪ್ರಾರಂಭಿಸಿದೆ.
*ನಾನು ಪ್ರತಿಭಟನೆ ನಡೆಸುತ್ತಿದ್ದ ಜಾಗಕ್ಕೆ ಕೆ.ಪಿ.ಎಸ್.ಸಿ. ಅಧಿಕಾರಿಗಳು ಬಂದು ಜುಲೈ 29 ರಿಂದ ಸಂದರ್ಶನಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು*.
ನಾನು ಈ ತೀರ್ಮಾನದ ಬಗ್ಗೆ ಲಿಖಿತ ಮೂಲಕ ಮಾಹಿತಿಯನ್ನು ನೀಡಬೇಕೆಂದು ಆಗ್ರಹಿಸಿದೆ. *ನಂತರ ಕೆ.ಪಿ.ಎಸ್.ಸಿ.ಕಾರ್ಯದರ್ಶಿ ಶ್ರೀ ಜನ್ನು ರವರು ನನಗೆ ಲಿಖಿತ ಮೂಲಕ “2015 ರ ಗೆಜೆಟೆಡ್ ಪ್ರೊಬೇಷನರ್ ಬ್ಯಾಚ್ ಅಭ್ಯರ್ಥಿಗಳಿಗೆ ಜುಲೈ 29 ರಿಂದ ಸಂದರ್ಶನ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ*.
ಈ ಎಲ್ಲಾ ಅಭ್ಯರ್ಥಿಗಳಿಗೆ ಇಂದು ಸಂದರ್ಶನ ದಿನಾಂಕದ ಭರವಸೆ ದೊರಕಿರುವುದಕ್ಕೆ ನಾನು ಅಭಿನಂದನೆ ಸಲ್ಲಿಸುವೆ. ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಹೋರಾಟದಲ್ಲಿ ಭಾಗಿಯಾಗಿದ್ದರು.
ದಿನಾಂಕ : 01-07-2019 ಸೋಮವಾರದಂದು ನಾನು ಘೋಷಿಸಿ ದಂತೆ ಇಂದು ಕೆ.ಪಿ.ಎಸ್.ಸಿ. ಕಛೇರಿಯ ಮುಂದೆ #ಉಪವಾಸ_ಸತ್ಯಾಗ್ರಹವನ್ನು
ಬೆಳಿಗ್ಗೆ.8.00 ಗಂಟೆಗೆ ಪ್ರಾರಂಭಿಸಿದೆ.
*ಹಿನ್ನೆಲೆ:*
2015 ರ ಬ್ಯಾಚ್ ನ KAS ಅಧಿಕಾರಿಗಳ ಆಯ್ಕೆಗಾಗಿ ಅಧಿಸೂಚನೆ ಹೊರಬಿದ್ದಿದ್ದು 12-05-2017 ರಂದು.
ಅದರ ಪೂರ್ವಭಾವಿ ಪರೀಕ್ಷೆ( preliminary exam) ನಡೆದದ್ದು 20-08-2017 ರಂದು.
ಮುಖ್ಯ ಪರೀಕ್ಷೆ ( Mains) ನಡೆದದ್ದು 2017 ರ ಡಿಸೆಂಬರ್ 16 ರಿಂದ 23 ರವರೆಗೆ.
ಆದರೆ ಒಂದು ವರ್ಷ ಕಳೆದರೂ ಫಲಿತಾಂಶ ದೊರಕಿರಲಿಲ್ಲ.ನಾನು ಈ ಕುರಿತು ಕೆ.ಪಿ.ಎಸ್.ಸಿ. ಅಧ್ಯಕ್ಷರು, ಕಾರ್ಯದರ್ಶಿ, ಎಲ್ಲರೊಡನೆ ಚರ್ಚಿಸಿ ಫಲಿತಾಂಶ ಬೇಗ ನೀಡಬೇಕೆಂದು ಆಗ್ರಹಿಸಿದ್ದೆ.
23-11-2018 ರಂದು ರಾಜ್ಯದ ಮುಖ್ಯಮಂತ್ರಿ ಗಳಿಗೆ ಈ ಕುರಿತು ಪತ್ರ ಬರೆದಿದ್ದೆ.
ದಿ.04-12-2018 ರಂದು ಕೆ.ಎ.ಸ್ ಮುಖ್ಯ ಪರೀಕ್ಷೆಗಳ ಫಲಿತಾಂಶ ಪ್ರಕಟಿಸ ಬೇಕೆಂದು ಕೆ.ಪಿ.ಎಸ್.ಸಿ ಕದ ತಟ್ಟುವ ಕಾರ್ಯಕ್ರಮ ಹಮ್ಮಿಕೊಂಡಿದ್ದೆ.
ಕೊನೆಗೂ ಒಂದು ವರ್ಷ ಒಂದು ತಿಂಗಳ ನಂತರ ಅಂದರೆ 28-01-2019 ರಂದು ಕೆ.ಎ.ಎಸ್ 2015 ನೇ ಬ್ಯಾಚ್ ಮುಖ್ಯ ಪರೀಕ್ಷೆಗಳ ಫಲಿತಾಂಶ ಪ್ರಕಟವಾಯಿತು.
ತದನಂತರ ಸಂದರ್ಶನದ ದಿನಾಂಕಕ್ಕಾಗಿ ಅಭ್ಯರ್ಥಿಗಳು ಕಾಯತೊಡಗಿದರು. ಆದರೆ ಅನೇಕ ಪ್ರಯತ್ನಗಳ ಮತ್ತು ಹೋರಾಟದ ನಂತರವೂ ಸಂದರ್ಶನದ ದಿನಾಂಕವನ್ನು ಪ್ರಕಟಿಸಲಿಲ್ಲ.
- ಆದ್ದರಿಂದ ನಾಡಿನ ವಿದ್ಯಾವಂತ ಯುವವಿರೋಧಿ ಕೆ.ಪಿ.ಎಸ್.ಸಿ.ಕಾರ್ಯವೈಖರಿ ಬದಲಾವಣೆಯಾಗದಿದ್ದರೆ ಈ ಸಂಸ್ಥೆಯ ಸ್ಥಾಪನೆಯ ಉದ್ದೇಶವೇ ವಿಫಲವಾಗುತ್ತದೆ.
ಜುಲೈ 29 ರಿಂದ ಪ್ರಾರಂಭವಾಗುವ ಸಂದರ್ಶನ ಹೋಟಾ ಸಮಿತಿಯ ಶಿಫಾರಸಿನಂತೆ ಪಾರದರ್ಶಕವಾಗಿ ನಡೆಯಬೇಕೆಂದು ಮತ್ತು ಯಾವುದೇ ಅನ್ಯಾಯಕ್ಕೆ ಅವಕಾಶ ನೀಡಬಾರದೆಂದು ನಾನು ಆಗ್ರಹಿಸುತ್ತೇನೆ.
*-ಎಸ್.ಸುರೇಶ್ ಕುಮಾರ್*,
*ಶಾಸಕರು,ರಾಜಾಜಿನಗರ*