ನವದೆಹಲಿ,ಜು.2- ಜೈಷ್-ಇ-ಮೊಹಮ್ಮದ್, ಲಷ್ಕರ್ ಇ ತೋಯ್ಬಾ , ಹಿಜ್ಬುಲ್ ಮುಜಾಹಿದ್ದೀನ್ನಂತಹ ಪ್ರಮುಖ ಉಗ್ರಗಾಮಿ ಸಂಘಟನೆಗಳ ಚಟುವಟಿಕೆಗಳನ್ನು ಹತ್ತಿಕ್ಕದ ನಂತರವೂ ಉಗ್ರಗಾಮಿಗಳಿಗೆ ಹಣ ಹರಿದುಹೋಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಭದ್ರತಾ ಸಂಸ್ಥೆಗಳು ನೀಲನಕ್ಷೆ ತಯಾರಿಸಿವೆ.
ಜೈಷ್-ಇ-ಮೊಹಮ್ಮದ್ ಸಂಘಟನೆಗಳ ಶಿಬಿರಗಳನ್ನು ನಾಶಗೊಳಿಸಿದ ಬಳಿಕವೂ ಅವರು ತಮ್ಮ ಚಟುವಟಿಕೆಗಳನ್ನು ಮುಂದುವರೆಸಿದ್ದು, ಉಗ್ರಗಾಮಿಗಳಿಗೆ ಹಣಕಾಸು ಸೌಲಭ್ಯ ಲಭ್ಯವಾಗುತ್ತಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಕೆಲವು ಉದ್ಯಮಿಗಳು ಭಯೋತ್ಪಾದಕ ಚಟುವಟಿಕೆ ನಡೆಸಲು ಹಣದ ಮೂಲವಾಗಿದ್ದಾರೆ. ಉಗ್ರರಿಗೆ ಹಣಕಾಸು ಪೂರೈಸುವ ಕೇಂದ್ರವಾಗಿದ್ದಾರೆ. ಡ್ರಗ್ಸ್ ಮತ್ತು ಹವಾಲಾ ಧನಸಹಾಯದ ಪ್ರಮುಖ ಮಾರ್ಗಗಳಾಗಿವೆ ಮುಂದುವರೆದಿದೆ ಎಂದು ಭದ್ರತಾ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಣ ಹರಿಯುವಿಕೆಯಿಂದಾಗಿ ಭಯೋತ್ಪಾದಕರಿಗೆ ತಮ್ಮ ಚಟುವಟಿಕೆಗಳನ್ನು ತೀವ್ರಗೊಳಿಸಲು ಪುಷ್ಟಿ ನೀಡಿದಂತಾಗಿದೆ. ಇದು ಸಂಪೂರ್ಣವಾಗಿ ಹತ್ತಿಕ್ಕಲು ಹಾಗೂ ಆತಂಕವಾದಿಗಳಿಗೆ ಹಣ ಸಿಗದಂತೆ ಬಿಗಿಗೊಳಿಸುವ ವಾತಾವವರಣವನ್ನು ನಿರ್ಮಾಣ ಮಾಡಲು ಭದ್ರತಾ ಸಂಸ್ಥೆಗಳು ರೂಪುರೇಷೆಗಳನ್ನು ಸಿದ್ದಪಡಿಸಿ ನೀಲನಕ್ಷೆ ರಚಿಸಿವೆ ಎಂದು ಸೇನಾ ಮೂಲಗಳು ತಿಳಿಸಿವೆ.
ಸೈನಿಕರನ್ನು ಗುರಿಯಾಗಿಸಿಕೊಂಡು ಪುಲ್ವಾಮದಲ್ಲಿ ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ 45ಕ್ಕೂ ಹೆಚ್ಚು ಯೋಧರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಭಾರತ ಪಾಕ್ ನೆಲೆಗೇ ನುಗ್ಗಿ ಘಟನೆಗೆ ಕಾರಣವಾದ ಜೈಷ್-ಇ-ಮೊಹಮ್ಮದ್ ಸಂಘಟನೆಗಳ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿ ಉಗ್ರರ ಅಡಗು ತಾಣಗಳನ್ನು ನೆಲಸಮಗೊಳಿಸಿತ್ತು.
ಉಗ್ರ ಚಟುವಟಿಕೆಗಳಿಗೆ ಮತ್ತಷ್ಟು ಕಡಿವಾಣ ಹಾಕಲು ಕಾಶ್ಮೀರದಲ್ಲಿ ಭಯೋತ್ಪಾದಕ ನಿಧಿಯನ್ನು ಉಸಿರುಗಟ್ಟಿಸುವ ಯೋಜನೆಯಲ್ಲಿ ಕಾರ್ಯ ಪ್ರವೃತರಾಗಿರುವ ಏಜೆನ್ಸಿಗಳು ಈಗ ಭಯೋತ್ಪಾದಕರಿಗೆ ಯಾವುದೇ ಮೂಲದಿಂದಲೂ ಹಣ ಸಿಗದಂತೆ ಮಾಡಲು ನೀಲನಕ್ಷೆಯನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದೆ.