ನವದೆಹಲಿ, ಜೂ.29-ಜಿಲ್ಲೆಯ ವಿವಿಧ ಕಡೆ ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಸಂಸದರಾದ ಜಿ.ಎಸ್.ಬಸವರಾಜ್ ಅವರು ರಾಜ್ಯ ಹಾಗೂ ಕೇಂದ್ರ ರೈಲ್ವೆ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಬಿದರೆ ರೋಡ್ ಎಂ.ಎಸ್ ಕೋಟೆ ರೋಡ್ ನಡುವೆ ನಿರ್ಮಾಣ ಆಗಬೇಕಿರುವ ಗುಬ್ಬಿ ಮೇಲ್ಸೇತುವೆ ಕಾಮಗಾರಿಗೆ 20 ಕೋಟಿ ರೂ, ಸಿದ್ಧಗಂಗಾ ಮಠ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ 20 ರೂ. ಕೋಟಿ, ಭೀಮಸಂದ್ರದ 6ನೇ ವಾರ್ಡ್ನಲ್ಲಿ ಪಾದಚಾರಿ ಅಂಡರ್ ಬ್ರಿಡ್ಜ್, 3 ಮೀ ಅಗಲ 2 1/2 ಮೀ ಎತ್ತರ ನಿರ್ಮಾಣ ಮತ್ತು ಬೆಂಗಳೂರು ತುಮಕೂರಿಗೆ ದಿನಪ್ರತಿ ಸಂಚರಿಸುವ ಹೊಸ ರೈಲು ಸಂಚಾರಕ್ಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ರೈಲ್ವೆ ರಾಜ್ಯ ಮಂತ್ರಿಯವರಾದ ಸುರೇಶ್ ಅಂಗಡಿಗೆ ಮತ್ತು ಪಿಯೂಷ್ ಗೋಯಾಲ್ಗೆ ಮನವಿ ಮಾಡಿದ್ದಾರೆ.