ಫ್ಲೋರಿಡಾ ಶಾಲೆಯಲ್ಲಿ ಹಳೆ ವಿದ್ಯಾರ್ಥಿಯಿಂದ ಗುಂಡಿನ ದಾಳಿ: 17 ಮಂದಿ ಬಲಿ

ಪಾರ್ಕ್‌‌ಲ್ಯಾಂಡ್‌: ಅಮೆರಿಕದ ಶಾಲೆಯೊಂದರಲ್ಲಿ ಹಳೆ ವಿದ್ಯಾರ್ಥಿಯೋರ್ವ ನಡೆದ ಗುಂಡಿನ ದಾಳಿ 17 ಮಂದಿಯನ್ನು ಬಲಿ ಪಡೆದಿದ್ದಾನೆ.
ಫ್ಲೋರಿಡಾದ ಮಾರ್ಜೊರಿ ಸ್ಟೋನ್ಮಸ್‌ ಡೌಗ್ಲಾಸ್‌ ಹೈಸ್ಕೂಲ್‌‌ನಲ್ಲಿ ಬುಧವಾರ ಈ ಮಾರಣಹೋಮ ನಡೆದಿದೆ. ಶಾಲೆಯ ಹಳೆ ವಿದ್ಯಾರ್ಥಿ ನಿಕೋಲಾಸ್‌ ಕ್ರೂಜ್  ಏಕಾಏಕಿ ಗುಂಡಿನ ದಾಳಿ ಮಾಡಿದ್ದು, ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ.
ಅಶಿಸ್ತಿನ ಹಿನ್ನೆಲೆಯಲ್ಲಿ ನಿಕೋಲಾಸ್‌ ಕ್ರೂಜ್‌ನನ್ನು ಶಾಲೆಯಿಂದ ವಜಾಗೊಳಿಸಲಾಗಿತ್ತು ಎನ್ನಲಾಗಿದೆ. ಬುಧವಾರ ಸೆಮಿ-ಆಟೋಮ್ಯಾಟಿಕ್‌ ರೈಫಲ್‌‌ನಿಂದ ಶಾಲೆಯಲ್ಲಿ ಗುಂಡಿನ ಸುರಿಮಳೆ ಹರಿಸಿದ್ದಾನೆ. 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಬ್ಬರು ಶಾಲೆಯ ಹೊರಗಡೆ, ಮತ್ತೋರ್ವ ಆಸ್ಪತ್ರೆಗೆ ಸಾಗಿಸುವ ದಾರಿ ಹಾಗೂ ಮತ್ತಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ದಾಳಿಯನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಖಂಡಿಸಿದ್ದು, ಮಡಿದವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಮಕ್ಕಳು, ಶಿಕ್ಷಕರು ಸೇರಿದಂತೆ ಯಾರೂ ಕೂಡ ಅಮೆರಿಕನ್‌ ಶಾಲೆಗಳು ಅಸುರಕ್ಷಿತವೆಂದು ಭಾವಿಸಬಾರದು. ದಾಳಿಕೋರನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ