ಶ್ರೀನಗರ, ಜೂ.26- ಕೇಂದ್ರ ಗೃಹ ಸಚಿವ ಅಮಿತ್ ಷಾ ಇಂದು ಕಣಿವೆ ರಾಜ್ಯ ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿನ ಭದ್ರತಾ ಏರ್ಪಾಡುಗಳ ಬಗ್ಗೆ ಪರಾಮರ್ಶೆ ನಡೆಸಿದರು.
ರಾಜಧಾನಿ ಶ್ರೀನಗರಕ್ಕೆ ಆಗಮಿಸಿದ ಷಾ ಅವರು, ಹಿರಿಯ ಸೇನಾಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಗಡಿ ಪ್ರದೇಶದಲ್ಲಿನ ಸೇನಾ ಸಿದ್ಧತೆ ಮತ್ತು ಭದ್ರತಾ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು.
ಕಣಿವೆ ರಾಜ್ಯದಲ್ಲಿ ಒಂದೆಡೆ ಉಗ್ರರ ಉಪಟಳ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಅವರನ್ನು ಮಟ್ಟ ಹಾಕುವ ಸೇನಾ ಕಾರ್ಯಾಚರಣೆಯೂ ತೀವ್ರಗೊಂಡಿರುವ ಬಗ್ಗೆ ಉನ್ನತಾಧಿಕಾರಿಗಳಿಂದ ಷಾ ಮಾಹಿತಿ ಪಡೆದರು.
ಇಂದು ಸಂಜೆ ಗೃಹ ಸಚಿವರು ಕೆಲವು ಜಿಲ್ಲೆಗಳ ಬಿಜೆಪಿ ಕಾರ್ಯಕರ್ತರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ.
ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಷಾ ಅವರ ಮೊದಲ ಕಾಶ್ಮೀರ ಭೇಟಿ.