ಟ್ರಾಫಿಕ್ ಸರಳೀಕರಣಗೊಳಿಸುವ ಹಿನ್ನಲೆ-ವಿದ್ಯಾರ್ಥಿಗಳಿಂದ ಸ್ವಿಪ್ಟ್ ಪ್ಯಾಸೇಜ್ ಎಂಬ ಹೊಸ ಅವಿಷ್ಕಾರ

ಬೆಂಗಳೂರು, ಜೂ.26- ನಗರಗಳಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಆಂಬ್ಯುಲೆನ್ಸ್‍ಗಳಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವ ಸಲುವಾಗಿ ಬೆಂಗಳೂರಿನ ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಹೊಸ ಸ್ಮಾರ್ಟ್ ವ್ಯವಸ್ಥೆಯನ್ನು ಆವಿಷ್ಕಾರ ಮಾಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರಾಧ್ಯಾಪಕ ಡಾ.ದಿನೇಶ್ ಕೆ.ಅನ್ವೆಕರ್ ಮಾತನಾಡಿ, ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ 4 ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಟ್ರಾಫಿಕ್ ಸರಳೀಕರಣಗೊಳಿಸಲು ಸ್ವಿಪ್ಟ್ ಪ್ಯಾಸೇಜ್ ಎಂಬ ಹೊಸ ಮಾದರಿಯನ್ನು ಆವಿಷ್ಕಾರಿಸಿದ್ದಾರೆ ಎಂದು ಹೇಳಿದರು.

ವಾಹನ ದಟ್ಟಣೆ ಸಮಸ್ಯೆಯಿಂದ ಆಂಬುಲೆನ್ಸ್ ಮುಂದೆ ಸಾಗಲು ಟ್ರಾಫಿಕ್ ಜಂಕ್ಷನ್‍ನಲ್ಲಿ ತ್ವರಿತವಾಗಿ ಸಂಚಾರಕ್ಕೆ ಅನುವು ಮಾಡಿಕೊಡಲು ಹೊಸ ಮಾರ್ಗ ಕಂಡುಹಿಡಿದಿದ್ದು ಮೊದಲನೆಯದಾಗಿ ಟ್ರಾಫಿಕ್ ಲೈಟ್ ಘಟಕದಲ್ಲಿ 2 ಮೈಕ್ರೋ ಕಂಟ್ರೋಲರ್ ಬೋರ್ಡ್‍ಗಳು ಮತ್ತು ದೀಪದೊಳಗೆ ಒಂದು ಮೈಕ್ರೋ ಕಂಟ್ರೋಲರ್ ಮೂಲಕ ಎಲೆಕ್ಟ್ರಾನಿಕ್ ಮತ್ತು ಸಂವಹನ ಕಾರ್ಯಗಳನ್ನು ಅಳವಡಿಸಲಾಗಿದೆ.

ಟ್ರಾಫಿಕ್ ದೀಪಗಳ ನಿಯಂತ್ರಣ ವ್ಯವಸ್ಥೆ ಯು ಕೆಂಪು ದೀಪದ ಮೇಲೆ ಲೈಟ್ ಕೋಡ್ ಸೀಕ್ವೇನ್ಸ್ ಡಿಟೆಕ್ಟರ್ ಜೊತೆಗೆ ಶಕ್ತಿಯುತವಾದ ದೀಪ ಹೊರಸೂಸುವ ಬೆಳಕಿನ ನಾಡಿಯ ಅನುಕ್ರಮವಾಗಿ ಕೆಲಸ ಮಾಡುತ್ತದೆ. ಭಾರಿ ವಾಹನ ದಟ್ಟಣೆಯ ಸಂದರ್ಭದಲ್ಲಿ ಆಂಬ್ಯುಲೆನ್ ಚಾಲಕ ಲೈಟ್ ಸೆನ್ಸಾರ್‍ನಲ್ಲಿ ಬೆಳಕಿನ ಕಿರಣಗಳನ್ನು ಒತ್ತಿದಾಗ ಸುತ್ತಲೂ ಕಫ್ಪು ಹಳದಿಯ ದೀಪ ಸ್ಪಷ್ಟವಾಗಿ ಕಂಡುಬರುತ್ತದೆ. ಆ ಮೂಲಕ ಆಂಬುಲೆನ್ಸ್ ಟ್ರಾಫಿಕ್ ಜಂಕ್ಷನ್ ಮೂಲಕ ಹಾದುಹೋಗಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ