ಇದೇ 30ರಂದು ಸರ್.ಎಂ.ವಿಶ್ವೇಶ್ವರಯ್ಯ ಇಂಜನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ನ 27ನೇ ವಾರ್ಷೀಕೋತ್ಸವ

ಬೆಂಗಳೂರು, ಜೂ.26-ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ನ 27ನೇ ವಾರ್ಷಿಕೋತ್ಸವದ ಅಂಗವಾಗಿ ಇದೇ 30 ರಂದು ನಯನ ರಂಗಮಂದಿರದಲ್ಲಿ ಕೊಪ್ಪಳದ ಬದರೀನಾಥ್ ಪುರೋಹಿತರ ವ್ಯಂಗ್ಯ ಪರ್ವತದೊಳಗಿನ ಜ್ವಾಲಾಮುಖಿ ಎಂಬ ಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

ಇದೇ ವೇಳೆ 500ಕ್ಕೂ ಹೆಚ್ಚು ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ.

ಕೊಪ್ಪಳದ ಬದರೀನಾಥ್ ಪುರೋಹಿತ್ ಅವರ ವ್ಯಂಗ್ಯಚಿತ್ರಗಳು ಬಹುಬೇಗನೆ ನಮ್ಮ ಗಮನಸೆಳೆಯುತ್ತವೆ. ಪ್ರತಿ ವ್ಯಂಗ್ಯ ಚಿತ್ರಗಳು ಸಮಾಜಕ್ಕೆ ಸಂದೇಶ ನೀಡುತ್ತಿದೆ. ನಾಡಿನ ಎಲ್ಲಾ ಪತ್ರಿಕೆಗಳಿಗೆ ಖಾಯಂ ವ್ಯಂಗ್ಯ ಚಿತ್ರಗಳನ್ನು ಕಳುಹಿಸುತ್ತಿರುತ್ತಾರೆ.

ಈಗಾಗಲೇ ಬೆಂಗಳೂರಿನ ನಯನ, ರವೀಂದ್ರ ಕಲಾಕ್ಷೇತ್ರ, ಮಲ್ಲತ್ತಹಳ್ಳಿ ಪುಲಕೇಶಿ ರಂಗಮಂದಿರ, ಚಿತ್ರಸಂತೆಗಳಲ್ಲಿ ಪ್ರದರ್ಶನದ ಮೂಲಕ ಬೆಂಗಳೂರಿನ ವ್ಯಂಗ್ಯ ಚಿತ್ರ ಪ್ರಿಯರಿಗೆ ಪರಿಚಿತರಾಗಿದ್ದಾರೆ.

ಒಂದು ಗಂಟೆ ಅವರ ಮುಂದೆ ಕುಳಿತರೆ ವ್ಯಂಗ್ಯ ಚಿತ್ರ ಸ್ಥಳದಲ್ಲಿಯೇ ಬಿಡಿಸಿ ಕೊಡಲಿದ್ದಾರೆ.ಇದೇ 30 ರಂದು ಬೆಳಗ್ಗೆ 11 ರಿಂದ ರಾತ್ರಿ 9ರವರೆಗೆ ಪ್ರದರ್ಶನ ಏರ್ಪಡಿಸಲಾಗಿದೆ.

500 ರೂ.ಗಳಿಂದ 2000 ರೂ.ಗಳವರೆಗೆ ಅತ್ಯುತ್ತಮ ವ್ಯಂಗ್ಯ ಚಿತ್ರಗಳನ್ನು ಖರೀದಿಸುವ ಸುವರ್ಣಾವಕಾಶ ನಿಮ್ಮ ಮುಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ