ಢಾಕಾ:ಮಾ-27: ಪಾಕಿಸ್ತಾನವನ್ನು ಪ್ರೀತಿಸುವವರನ್ನು ಪತ್ತೆಮಾಡಿ ಶಿಕ್ಷಿಸಲೇಬೇಕು ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.
ಢಾಕಾಜದಲ್ಲಿ ಆಡಳಿತಾ ರೂಢ ಅವಾಮಿ ಲೀಗ್ ಪಕ್ಷ ಬಂಗಬಂಧು ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್ ನಲ್ಲಿ ಆಯೋಜನೆ ಮಾಡಲಾಗಿದ್ದ ಬಾಂಗ್ಲಾ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶೇಖ್ ಹಸೀನಾ ಪಾಕಿಸ್ತಾನದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿರುವ ಪಾಕಿಸ್ತಾನಿ ಪ್ರಿಯರನ್ನು ಪತ್ತೆ ಮಾಡಿ ಶಿಕ್ಷಿಸಲೇ ಬೇಕಿದೆ ಎಂದು ಹೇಳಿದರು.
“1971 ಮಾರ್ಚ್ 25ರಂದು ಬಾಂಗ್ಲಾ ವಿಮೋಚನೆ ವೇಳೆ ಪಾಕಿಸ್ತಾನ ನಮ್ಮ ನಾಡಿನಲ್ಲಿ ನಡೆಸಿದ ನರಮೇಧವನ್ನು ನೆನಪಿಸಿಕೊಳ್ಳಿ, ಲಕ್ಷಾಂತರ ಅಮಾಯಕರನ್ನು ಕೊಂದು ನಮ್ಮ ಮನೆಯ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ವೆಸಗಿ ಕ್ರೂರವಾಗಿ ಕೊಂದು ಹಾಕಲಾಗಿತ್ತು. ಆ ದೃಶ್ಯಗಳು ಇನ್ನೂ ನಮ್ಮ ಕಣ್ಣ ಮುಂದಿದೆ. ದೇಶದಲ್ಲಿರುವ ಪಾಕಿಸ್ತಾನಿ ಪ್ರಿಯರನ್ನು ಗುರುತಿಸಲು ಬಾಂಗ್ಲಾದೇಶ ಪ್ರಜೆಗಳು ಸರ್ಕಾರಕ್ಕೆ ನೆರವು ನೀಡಬೇಕು. ಇಲ್ಲವಾದಲ್ಲಿ ನಮ್ಮ ನೆಲದಲ್ಲಿ ನಮ್ಮ ಅಸ್ಥಿತ್ವವೇ ಇರುವುದಿಲ್ಲ ಎಂದು ಹಸೀನಾ ಹೇಳಿದ್ದಾರೆ.
ಇದೇ ವೇಳೆ 1975ರಲ್ಲಿ ಹತ್ಯೆಗೀಡಾದ ತಮ್ಮ ತಂದೆ ಶೇಖ್ ಮುಜಿಬುರ್ ರೆಹಮಾನ್ ಅವರನ್ನು ನೆನಪಿಸಿಕೊಂಡ ಶೇಖ್ ಹಸೀನಾ, ಭಾವುಕರಾದರು. ಇದೇ ವೇಳೆ ಕೆಲ ವಿಪಕ್ಷ ನಾಯಕರು ಪಾಕಿಸ್ತಾನಿ ಪ್ರಿಯರು ಎಂದು ಕರೆದ ಹಸೀನಾ ತಮ್ಮ ರಾಜಕೀಯ ವಿರೋಧಿ, ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಮುಖ್ಯಸ್ಥ ಜಿಯಾ ಉರ್ ರೆಹಮಾನ್ ಮತ್ತು ಅವರ ಪತ್ನಿ ತಮ್ಮ ಬದ್ಧ ವೈರಿ. ಬೇಗಂ ಖಲೀದಾ ಜಿಯಾ ಪಾಕಿಸ್ತಾನ ದೇಶವನ್ನು ಪ್ರೀತಿಸುತ್ತಾರೆ. ಇಂತಹವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ತಮ್ಮ ಆಕ್ರೋಶ ಹೊರಹಾಕಿದರು.
1975ರ ಬಳಿಕ ಬಾಂಗ್ಲಾದೇಶದಲ್ಲಿ ಸಂಪೂರ್ಣ ಚಿತ್ರಣವೇ ಬದಲಾಗಿ ಹೋಗಿತ್ತು. 75ರ ಬಳಿಕ ಬಾಂಗ್ಲಾದೇಶದ ಯಾವೊಬ್ಬ ಪ್ರಜೆಕೂಡ ಪಾಕಿಸ್ತಾನಿ ಸೇನೆಯನ್ನು ಬಾಂಗ್ಲಾ ಸೇನೆ ಎಂದು ಕರೆಯುತ್ತಿರಲಿಲ್ಲ. ಬದಲಿಗೆ ಪಾಕ್ ಆಕ್ರಮಿತ ಸೈನಿಕರು ಎಂದು ಕರೆಯುತ್ತಿದ್ದರು. 1975ರಲ್ಲಿ ಅಧಿಕಾರಕ್ಕೆ ಬಂದವರು ಪ್ರಜೆಗಳ ಹಣೆಬರಹ ಬದಲಿಸಲು ಬಂದವಾರಾಗಿರಲಿಲ್ಲ. ತಮ್ಮ ಸ್ವಹಿತಾಸಕ್ತಿಗಾಗಿ ರಾಜಕೀಯ ಮಾಡಿದರು. ಬಾಂಗ್ಲಾದೇಶದ ಅಭಿಲವೃದ್ಧಿ ಬೇಕಿರಲಿಲ್ಲ ಎಂದು ಹಸೀನಾ ಹೇಳಿದರು
Dhaka, Bangladesh, Sheikh Hasina