ಇಂದಿನಿಂದ 24ರವರೆಗೆ 8ನೇ ಎಲೇಸಿಯಾ-2019

Varta Mitra News

ಬೆಂಗಳೂರು,ಜೂ.21- ಇಂಧನ, ವಿದ್ಯುತ್, ನಿಯಂತ್ರಕಗಳು ಮತ್ತು ವಿದ್ಯುದ್ದೀಪಗಳ ವಿಶ್ವದ ಅತ್ಯುತ್ತಮವಾದ ಪ್ರದರ್ಶನ 8ನೇ ಎಲೇಸಿಯಾ-2019ಅನ್ನು ನಗರದ ಬಿಐಇಸಿಯಲ್ಲಿ ಇಂದಿನಿಂದ 24ರವರೆಗೆ ನಡೆಯಲಿದೆ.

ಬೆಂಗಳೂರು ಇಂಟನ್ರ್ಯಾಷನಲï ಎಕ್ಸಿಬಿಷನ್ ಸೆಂಟರ್‍ನಲ್ಲಿ ನಡೆಯುತ್ತಿರುವ ಈ ಪ್ರದರ್ಶನದಲ್ಲಿ ಎಲೆಕ್ಟ್ರಿಕಲï, ಲೈಟಿಂಗ್ ಪವರ್ ಸಮುದಾಯ ಅಂದರೆ ಉದ್ಯಮದ ಪ್ರತಿನಿಧಿಗಳು ಮತ್ತೊಮ್ಮೆ ಒಂದೆಡೆ ಸೇರಲಿದ್ದಾರೆ.

ಜಗತ್ತಿನ 5 ವಿವಿಧ ದೇಶಗಳ 400 ಕ್ಕೂ ಅಧಿಕ ಪ್ರದರ್ಶಕರು ಈ ಎಲೇಸಿಯಾ ಉತ್ಪನ್ನಗಳನ್ನು ಪ್ರದರ್ಶನ ಮಾಡಲಿದ್ದಾರೆ. ಈ ವರ್ಷದ ಎಲೇಸಿಯಾ ದೇಶದ ಎಲ್ಲಾ ಭಾಗಗಳಿಂದ ಆಗಮಿಸುವ ಪ್ರತಿನಿಧಿಗಳನ್ನು ಆಕರ್ಷಿಸಲಿದೆ.

ಪ್ರಮುಖ ಎಲೆಕ್ಟ್ರಿಕಲ್, ಲೈಟಿಂಗ್ಸ್ ವಿದ್ಯುತ್ ಕ್ಷೇತ್ರದ ಉದ್ಯಮಗಳಿಗೆ ಮತ್ತು ನಿರ್ಧಾರ ತೆಗೆದುಕೊಳ್ಳುವವರಿಗೆ ಕಟಿಂಗ್ ಎಡ್ಸ್ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶನ ಮಾಡುವುದಕ್ಕೆ ಮಾತ್ರವಲ್ಲದೇ, ಮುಖಾಮುಖಿ ವ್ಯವಹಾರ ಸಂಬಂಧಿತ ಸಂವಾದಗಳು, ಸಂಪರ್ಕಗಳನ್ನು ಕಲ್ಪಿಸಲಿದೆ.

ಟ್ರೂಯಿನ್ ಎಕ್ಸಿಬಿಟರ್ಸ್ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಸಿರಿಲ್ ಪೆರೇರಾ ಮಾತಾಡಿ, ಪ್ರತಿಯೊಂದು ಸರಣಿಯಲ್ಲೂ ಪ್ರದರ್ಶಕರು ಮತ್ತು ದೇಶಗಳು ಹೆಚ್ಚಾಗುತ್ತಾ ಬರುತ್ತಿವೆ. ಆಧುನಿಕ ಉದ್ಯಮಕ್ಕೆ ಹೊಸ ರೂಪ ನೀಡುತ್ತಿರುವ ಅತ್ಯುತ್ತಮವಾದ ಎಲೆಕ್ಟ್ರಿಕ್ ಟ್ರೆಂಡ್‍ಗಳನ್ನು ಪ್ರದರ್ಶಿಸಲು ಎಲೇಸಿಯಾ ಒಂದು ಕಾರ್ಯತಂತ್ರದ ವೇದಿಕೆ ಎಂದು ಪರಿಗಣಿಸಲ್ಪಡುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ