ಜಾಗೊ ಯುವ ಭಾರತ ಶೈಕ್ಷಣಿಕ ಕಿರುಸಾಕ್ಷ್ಯಚಿತ್ರ ನಿರ್ಮಾಣ-ವಿದ್ಯಾರ್ಥಿಗಳಿಗಾಗಿಯೇ ನಿರ್ಮಿಸಿದ ಚಿತ್ರ

Varta Mitra News

ಬೆಂಗಳೂರು,ಜೂ.21- ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ನಮ್ಮ ಭೂಮಿಯ ಉಗಮದಿಂದ ಹಿಡಿದು ಆಹಾರ ತಯಾರಿಕೆಯ ಪ್ರತಿ ಹಂತವನ್ನು ಖುದ್ದು ಅರಿತಿರಬೇಕಾದ ಅವಶ್ಯಕತೆ ಇದೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡರು ತಿಳಿಸಿದ್ದಾರೆ.

ಹ್ಯೂಮನ್ ರಿಲೆವಂಟ್ ರಿಸರ್ಚ್ ಇನ್ಸ್‍ಟಿಟ್ಯೂಟ್ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಂಯುಕ್ತಾಶ್ರಯದಲ್ಲಿ ಕಾರ್ಯಯೋಜನೆ ರೂಪಿಸಲು ಸರ್ಕಾರ ಹಾಗೂ ಸರ್ಕಾರೇತರ ಮುಖ್ಯಸ್ಥರ ಪೂರ್ವ ಭಾವಿ ಸಭೆಯಲ್ಲಿ ಜಾಗೋ ಯುವ ಭಾರತ ಶೈಕ್ಷಣಿಕ ಕಿರುಸಾಕ್ಷ್ಯಚಿತ್ರ ನಿರ್ಮಾಣ ಕುರಿತು ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಜಾಗೋ ಯುವ ಭಾರತ ವಿದ್ಯಾರ್ಥಿಗಳಿಗಾಗಿಯೇ ನಿರ್ಮಿಸಲಾಗುತ್ತಿರುವ ಕಿರು ಚಿತ್ರವಾಗಿದೆ. ಭೂಮಿಯ ಉಗಮದಿಂದ ಹಿಡಿದು ಆಹಾರ ಪದಾರ್ಥ ಉತ್ಪಾದನೆ, ತಯಾರಿಕೆಯ ಪ್ರತಿ ಹಂತವನ್ನು ಅರಿಯಬೇಕು. ಇಂತಹ ಅಮೂಲಾಗ್ರ ವಿಷಯಗಳನ್ನು ಈ ಕಿರುಚಿತ್ರದ ಮೂಲಕ ಪ್ರಚುರಪಡಿಸಬೇಕೆಂದು ಅವರು ಸಲಹೆ ನೀಡಿದರು.

ಸಮಾಜ ವಿಜ್ಞಾನಿ ರವೀಂದ್ರನಾಥ್ ಅವರ ನಿರ್ದೇಶನದಲ್ಲಿ ಜಾಗೊ ಯುವ ಭಾರತ ಕಿರುಚಿತ್ರದ ಚಿತ್ರೀಕರಣ ರಾಷ್ಟ್ರಾದ್ಯಂತ ಚಿತ್ರೀಕರಿಸಿ 27 ಭಾಷೆಗಳಲ್ಲಿ ನೈಜವಾದ ಪರಿಕಲ್ಪನೆಗಳನ್ನು ಆಧರಿಸಿ ಹಿರಿಯ ಛಾಯಾಗ್ರಾಹಕ ಬಸವರಾಜ್, ವಾಣಿಜ್ಯ ಮಂಡಳಿ ನಿಕಟಪೂರ್ವ ಉಪಾಧ್ಯಕ್ಷ ಬಣಕಾರ್ ಸಂಯೋಜಿಸುತ್ತಿದ್ದಾರೆ.

ಶಿಕ್ಷಣ ಇಲಾಖೆಯಿಂದ ಎಂ.ನಜುಂಡಗೌಡರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕುರಿತು ಸಲಹೆ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ. ಕರ್ನಲ್ ಮಹೇಶ್ವರಪ್ಪ ಅವರು ಸೇನೆ ಬಗ್ಗೆ, ಕೈಗಾರಿಕೋದ್ಯಮಿ ರಮೇಶ್ ಉದ್ಯಮದ ಬಗ್ಗೆ ತಿಳಿಸಿಕೊಟ್ಟರು.

ವಾಣಿಜ್ಯ ಮಂಡಳಿಯ ಎಂ.ಟಿ.ಚಿದಾನಂದ, ಸಿಇಒ ಶೈಲಜಾ, ಉಪನ್ಯಾಸಕ ಪಾರ್ಥ ಭಾಗವಹಿಸಿದ್ದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಎಂ.ನಂಜುಂಡಗೌಡ ಮುಖ್ಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ