ಡೆಹ್ರಾಡೂನ್, ಮಾ.26-ಈಶಾನ್ಯ ರಾಜ್ಯ ಸಿಕ್ಕಿಂನ ಡೋಕ್ಲಾಂ ಪ್ರದೇಶದಲ್ಲಿ ಯಾವುದೇ ಮುಂಗಾಣದ ಪರಿಸ್ಥಿತಿ ನಿಭಾಯಿಸಲು ಭಾರತವು ಕಟ್ಟೆಚ್ಚರದೊಂದಿಗೆ ಸಂಪೂರ್ಣ ಸಿದ್ಧವಾಗಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿ ಉತ್ತರಖಂಡಕ್ಕೆ ಭೇಟಿ ನೀಡಿದ ಅವರು ಡೆಹ್ರಾಡೂನ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಭಾರತದ ಮೂರು ಪಡೆಗಳನ್ನು ಆಧುನೀಕರಣಗೊಳಿಸುವತ್ತ ಸರ್ಕಾರ ನಿರಂತರವಾಗಿ ಕಾರ್ಯೋನ್ಮುಖವಾಗಿವೆ ಎಂದು ಅವರು ಸ್ಪಷ್ಟಪಡಿಸಿದರು.
ನಮ್ಮ ಪ್ರಾದೇಶಿಕ ಸಮಗ್ರತೆ ಮತ್ತು ಗಡಿ ಭಾಗಗಳ ರಕ್ಷಣೆಗಾಗಿ ನಾವು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.