ಬೆಂಗಳೂರು, ಜೂ.12-ಆರೋಗ್ಯದ ಬಗ್ಗೆ ಅರಿವು ಮೂಡಿಸಲು ದಶಮುಖ ಸಾಮಾಜಿಕ ಸೇವಾ ಟ್ರಸ್ಟ್ ವತಿಯಿಂದ ಜೂ.26ರಂದು ರಾಜ್ಯಮಟ್ಟದ ನಾಟಿ ಕೋಳಿ ಸಾಂಬಾರಿನಲ್ಲಿ ರಾಗಿ ಮುದ್ದೆ ತಿನ್ನುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಸ್ಪರ್ಧೆ ಜಯನಗರದ 7ನೇ ಹಂತ, ಯಡಿಯೂರು ಕೆರೆ ಪಕ್ಕದ ಇರುವ ಬಿಬಿಎಂಪಿ ಸಮುದಾಯ ಭವನದಲ್ಲಿ ಮಧ್ಯಾಹ್ನ 12.30ಕ್ಕೆ ನಡೆಯಲಿದೆ.
ಪ್ರಥಮ ಬಹುಮಾನ 15 ಸಾವಿರ, ದ್ವಿತೀಯ 10 ಸಾವಿರ, ತೃತೀಯ 5 ಸಾವಿರ ರೂ. ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.
26ರಂದು ಬೆಳಗ್ಗೆ 11 ಗಂಟೆಗೆ ರಾಗಿಗಂಜಿ ಮತ್ತು ರಾಗಿಮುದ್ದೆ ಊಟ ಮಾಡುವುದರಿಂದ ಜನರ ಆರೋಗ್ಯದಲ್ಲಿ ಆಗುವ ಅನುಕೂಲಗಳ ಬಗ್ಗೆ ಖ್ಯಾತ ವೈದ್ಯರು ಹಾಗೂ ನುರಿತ ರಾಗಿ ತಜ್ಞರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ.
ಭಾಗವಹಿಸಲು ಇಚ್ಛಿಸುವ ಸ್ಪರ್ಧಿಗಳು ಜೂ.20ರೊಳಗೆ ಹೆಸರುಗಳನ್ನು ಆರ್.ಅಶ್ವತ್ಥನಾರಾಯಣ ಗೌಡ, ಮೊ: 9060622286ರಲ್ಲಿ ನೋಂದಾಯಿಸಿಕೊಳ್ಳಬೇಕೆಂದು ದಶಮುಖ ಸಾಮಾಜಿಕ ಸೇವಾ ಟ್ರಸ್ಟ್ ಅಧ್ಯಕ್ಷ ಎಚ್.ಕೆ.ಬೊಮ್ಮೇಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊ: 9242295531 ಅಥವಾ 9483501818 ಹಾಗೂ 7892675175 ಸಂಪರ್ಕಿಸಬಹುದು.