ಟೀಂ ಇಂಡಿಯಾದ ಗೆಲುವಿಗೆ ಬೌಲರ್ಸ್ಗಳೇ ಕಾರಣ :ಮತ್ತೊಮ್ಮೆ ಮ್ಯಾಚ್ ವಿನ್ನರ್ಸ್ ಆದ ಟೀಂ ಇಂಡಿಯಾ ಬೌಲರ್ಸ್

ನಿನ್ನೆ ಟೀಂ ಇಂಡಿಯಾ ಕಾಂಗರೂಗಳ ವಿರುದ್ಧ ಭರ್ಜರಿ ಗೆಲುವು ದಾಖಲಿಸಲು ಕಾರಣವಾಗಿದ್ದು ಟೀಂ ಇಂಡಿಯಾ ಬೌಲರರ್ಸ್ಗಳು . ರನ್ ಹೊಳೆ ಹರಿಯುವ ಬ್ಯಾಟ್ಸ್ಮನ್ಗಳಿಗೆ ನೆರವಾಗುವ ಒವೆಲ್ ಅಂಗಳದಲ್ಲಿ ಟೀಂ ಇಂಡಿಯಾ ಬೌಲರ್ಸ್ಗಳು ಪರಾಕ್ರಮ ಮೆರೆದ್ರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಓಪನರ್ ಶಿಖರ್ ಧವನ್ ಶತಕದ ನೆರವವಿನಿಂದ 352 ರನ್ಗಳ ಬಿಗ್ ಸ್ಕೋರ್ ಕಲೆ ಹಾಕಿತು. ಆದ್ರೆ ರನ್ ಮಳೆ ಸುರಿಯುವ ಒವೆಲ್ ಅಂಗಳದಲ್ಲಿ ಎದುರಾಳಿಗಳ ವಿಕೆಟ್ ಪಡೆಯೋದು ಅಷ್ಟು ಸುಲಭವಾಗಿರಲಿಲ್ಲ.

353 ರನ್ಗಳ ಸವಾಲನ್ನ ಕೊಟ್ಟ ಟೀಂ ಇಂಡಿಯಾ ಫೀಲ್ಡಿಂಗ್ ಮಾಡುವಾಗ ಆರಂಭದಲ್ಲೆ ಹಿನ್ನಡೆ ಅನುಭವಿಸಿತು. ಟೀಂ ಇಂಡಿಯಾ ವೇಗಿಗಳು ಆಸಿಸ್ ಓಪನರ್ಸ್ ಗಳಾದ ಡೇವಿಡ್ ವರ್ನಾರ್ ಮತ್ತು ಆ್ಯರಾನ್ ಫಿಂಚ್ರನ್ನ ಔಟ್ ಮಾಡಲು ಸಾಧ್ಯವಾಗಲ್ಲಿಲ್ಲ. ಅದೃಷ್ಟವಶತ್ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಆ್ಯರಾನ್ ಫಿಂಚ್ ರನೌಟ್ ಬಲೆಗೆ ಬಿದ್ರು.

ಇದಾದ ನಂತರ ಅರ್ಧ ಶತಕ ಬಾರಿಸಿ ಮುನ್ನಗುತ್ತಿದ್ದ ಡೇವಿಡ್ ವಾರ್ನರ್ ಚಹಲ್ ಎಸೆತದಲ್ಲಿ ಸಿಕ್ಸ್ ಬಾರಿಸಲು ಹೋಗಿ ಭುವಿಗೆ ಕ್ಯಾಚ್ ಕೊಟ್ರು. ನಂತರ ಅರ್ಧಶತಕದತ್ತ ಮುನ್ನಗುತ್ತಿದ್ದ ಉಸ್ಮಾನ್ ಖ್ವಾಜಾಅವರನ್ನ ಬೂಮ್ರಾ ಬೌಲ್ಡ್ ಮಾಡಿದ್ರು.

ಇಡೀ ಪಂದ್ಯಕ್ಕೆ ದೊಡ್ಡ ತಿರುವು ನೀಡಿದ್ದು 40ನೇ ಓವರ್. ಡೆತ್ ಓವರ್ನಲ್ಲಿ ಕಣಕ್ಕಿಳಿದ ಸ್ವಿಂಗ್ ಭುವನೇಶ್ವರ್ ಕುಮಾರ್ ಒಂದೇ ಓವರ್ನಲ್ಲಿ ಸ್ಟೀವ್ ಸ್ಮಿತ್ ಮತ್ತು ಆಲ್ರೌಂಡರ್ ಸ್ಟೋಯ್ನಿಸ್ ಅವರ ಬ್ಯಾಕ್ ಟು ಬ್ಯಾಕ್ ವಿಕೆಟ್ಗಳನ್ನ ಪಡೆದು ಮಿಂಚಿದ್ರು.

ನಂತರ ಬಂದ ಆಸಿಸ್ ಬ್ಯಾಟ್ಸ್ಮನ್ಗಳು ಒತ್ತಡಕ್ಕೆ ಸಿಲುಕಿದ್ರು. ಗ್ಲೇನ್ ಮ್ಯಾಕ್ಸ್ವೆಲ್ 28 ರನ್ ಗಳಿಸಿದ್ದಾಗ ಚಹಲ್ ಎಸೆತದಲ್ಲಿ ರವೀಂದ್ರ ಜಡೇಜಾಗೆ ಕ್ಯಾಚ್ ನೀಡಿ ಹೊರ ನಡೆದ್ರು. ಕೊನೆಯಲ್ಲಿ ಆ್ಯಲೆಕ್ಸ್ ಕ್ಯಾರಿ ಅರ್ಧ ಶತಕ ಬಾರಿಸಿದರಾದರು ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಆಸ್ಟ್ರೇಲಿಯಾ ತಂಡ 316 ರನ್ಗಳಿಗೆ ಸರ್ವ ಪತನ ಕಂಡಿತು.

ಟೀಂ ಇಂಡಿಯಾ ಪರ ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾ ತಲಾ ಮೂರು ವಿಕೆಟ್ ಪಡೆದು ಮಿಂಚಿದ್ರು. ಯಜ್ವಿಂದರ್ ಚಹಲ್ ಎರಡು ವಿಕೆಟ್ ಮಿಂಚಿದ್ರು.

ಒಟ್ಟಾರೆ ಎರಡನೇ ಪಂದ್ಯದಲ್ಲೂ ಟೀಂ ಇಂಡಿಯಾ ತಂಡದ ಬೌಲರ್ಸ್ಗಳ ನೆರವಿನಿಂದ ಸತತ ಎರಡು ಪಂದ್ಯಗಳನ್ನ ಗೆದ್ದು ಬೀಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ